PSI : ಪಿಎಸ್‌ಐ ನೇಮಕಾತಿ ಹಗರಣ : 52 ಅಭ್ಯರ್ಥಿಗಳು ಶಾಶ್ವತ ಡಿಬಾರ್, ಮಾಹಿತಿ ಇಲ್ಲಿದೆ

ಬೆಂಗಳೂರು: ರಾಜ್ಯದಲ್ಲಿ ಭಾರಿ ವಿವಾದ ಸೃಷ್ಟಿಸಿದ್ದ, 545 ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಆರೋಪಿಗಳಾಗಿದ್ದ 52 ಅಭ್ಯರ್ಥಿಗಳನ್ನು ಶಾಶ್ವತವಾಗಿ ಡಿಬಾರ್ ಮಾಡಿ ಪೊಲೀಸ್ ನೇಮಕ ವಿಭಾಗ ಮಂಗಳವಾರ ಆದೇಶ ಹೊರಡಿಸಿದೆ.
ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮದಲ್ಲಿ ಭಾಗಿಯಾದ ಇವರ ವಿರುದ್ಧ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆ ನಡೆಸುವ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ನಿಷೇಧಿಸಲಾಗಿದೆ ಎಂದು ನೇಮಕಾತಿ ವಿಭಾಗದ ಡಿಜಿಪಿ ಕಮಲ್ ಪಂತ್ ತಿಳಿಸಿದ್ದಾರೆ.
ಪೊಲೀಸ್ ಕೆಲಸಕ್ಕೂ ಕುತ್ತು: ಡಿಬಾರ್ ಆಗಿರುವ 52 ಅಭ್ಯರ್ಥಿಗಳಲ್ಲಿ 10 ಕಾನ್ ಸ್ಟೇಬಲ್ಗಳು ಇದ್ದಾರೆ. ಇದೀಗ ಅವರ ಪೊಲೀಸ್ ಸೇವೆಗೂ ಕುತ್ತು ಬಂದಿದೆ. ಅಲ್ಲದೆ, 402 ಎಸ್ಐ ಹುದ್ದೆಗಳ ನೇಮಕಾತಿಗೂ ಇವರು ಅರ್ಜಿ ಸಲ್ಲಿಸಿದ್ದರು. ದೈಹಿಕ ಪರೀಕ್ಷೆ ಮುಗಿದಿದ್ದು, ಲಿಖಿತ ಪರೀಕ್ಷೆ ಬಾಕಿ ಉಳಿದಿದೆ. ಇದರಿಂದಲೂ ಅವರನ್ನು ಹೊರಹಾಕಲಾಗಿದೆ.
ಡಿಬಾರ್ ಆದ ಅಭ್ಯರ್ಥಿಗಳು : ಎಸ್. ಜಾಗೃತ್, ಬಿ. ಗಜೇಂದ್ರ, ಸೋಮನಾಥ ಮಲ್ಲಿಕಾರ್ಜುನಯ್ಯ ಹಿರೇಮಠ, ಎಚ್.ಯು. ರಘುವೀರ್, ಎಂ.ಸಿ. ಚೇತನ್ಕುಮಾರ್, ಬಿ.ಸಿ. ವೆಂಕಟೇಶ್ ಗೌಡ, ಎ.ಪಿ. ಮನೋಜ್, ಜಿ.ಆರ್. ಮಂಜುನಾಥ್, ಪಿ. ಸಿದ್ದಲಿಂಗಪ್ಪ, ಎಸ್.ಮಮತೇಶ್ ಗೌಡ, ಎಚ್. ಯಶವಂತ್ಗೌಡ, ಸಿ.ಎಂ. ನಾರಾಯಣ, ಸಿ.ಎಸ್. ನಾಗೇಶ್ ಗೌಡ, ಆರ್. ಮಧು, ಸಿ. ಯಶವಂತ ದೀಪ್, ಸಿ.ಕೆ. ದಿಲೀಪ್ಕುಮಾರ್, ರಚನ ಹಣಮಂತ್, ಜಿ. ಶಿವರಾಜ್, ಸಿ. ಪ್ರವೀಣ್ಕುಮಾರ್, ಕೆ. ಸೂರ್ಯನಾರಾಯಣ, ಸಿ.ಎಂ. ನಾಗರಾಜ್, ಜಿ.ಸಿ. ರಾಘವೇಂದ್ರ, ಬೀರಪ್ಪ ಮೇತಿ, ಎಚ್. ಮೋಹನ್ಕುಮಾರ್, ಎನ್. ದಿಲೀಪ್ಕುಮಾರ್, ದರ್ಶನ್ಗೌಡ, ಲಕ್ಕಪ್ಪ ರಾವುತಪ್ಪ, ಎಚ್.ಬಿ. ಹರೀಶ್, ಜೆ. ಕುಶಾಲ್ಕುಮಾರ್, ವೀರೇಶ್, ಎನ್. ಚೇತನ್, ಕೆ. ಪ್ರವೀಣ್ಕುಮಾರ್, ಅರುಣ್ಕುಮಾರ್, ವಿಶಾಲ್, ಎಚ್.ವಿ. ಸುನೀಲ್, ಎಚ್.ಎನ್. ದೇಸಾಯಿ, ಶ್ರೀಧರ್, ಶಾಂತಿಬಾಯಿ, ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ, ಸುಪ್ರೀಯ ಹುಂಡೆಕರ್, ಪ್ರಭು ಇಟ್ಟಗರ್, ವಿಜಯಕುಮಾರ್ ಪೂಜಾರಿ, ಇಸ್ಮಾಲ್ ಖಾದಿರ್, ಯಶವಂತ ಮಾನೆ, ಎಸ್. ಶರಣಪ್ಪ ಪಾಟೀಲ್, ಬಿ. ಜೋಗೂರ್, ಸೋಮನಾಥ್, ಶ್ರೀಮಂತ ಸತ್ತಾಪುರ್, ರವಿರಾಜ್, ಪೀರಪ್ಪ ಮತ್ತು ಶ್ರೀಶೈಲಾ.