ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂನ್ 27 ರಂದು ಸಮಾರೋಪ ಸಮಾರಂಭ

ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸಂಜೆ ಕಾಲೇಜು, ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರದ 2022-2023ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ, ಎನ್.ಎಸ್.ಎಸ್, ಎನ್.ಸಿ.ಸಿ, ಯುವ ರೆಡ್ ಕ್ರಾಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ದಿನಾಂಕ 27-06-2023 ರಂದು ಮಂಗಳವಾರ ಬೆಳಿಗ್ಗೆ 10:30ಕ್ಕೆ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ಎಸ್ ಎಸ್ ಮಲ್ಲಿಕಾರ್ಜುನ್ ಸಚಿವರು ಗಣಿ ಮತ್ತು ಭೂ ವಿಜ್ಞಾನ ತೋಟಗಾರಿಕೆ ಇಲಾಖೆ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ ಬೆಂಗಳೂರು, ಇವರು ನೇರವೇರಿಸಲಿದ್ದಾರೆ.ಸಮಾರೋಪ ಭಾಷಣ ಶ್ರೀ ಹೆಚ್. ಬಿಲ್ಲಪ್ಪ ವಿಶ್ರಾಂತಿ ನ್ಯಾಯಾಧೀಶರು ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು, ಇವರು ಆಗಮಿಸಲಿದ್ದಾರೆ .ವಿಶೇಷ ಆಹ್ವಾನಿತರಾಗಿ ಪ್ರೊ.ಓಂಪ್ರಕಾಶ್ ರಾಜೋಳೆ ಪ್ರಾದೇಶಿಕ ಜಂಟಿ ನಿರ್ದೇಶಕರು ಕಾಲೇಜು ಶಿಕ್ಷಣ ಇಲಾಖೆ ಶಿವಮೊಗ್ಗ, ಇವರು ಆಗಮಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಗಡಿಗುಡಾಳ್ ಮಂಜುನಾಥ್ ಸದಸ್ಯರು ಮಹಾನಗರ ಪಾಲಿಕೆ ದಾವಣಗೆರೆ, ಉಪಸ್ಥಿತಿ ,ಡಾ. ಕೊಟ್ರಪ್ಪ.ಸಿ.ಕೆ. ಪ್ರಾಂಶುಪಾಲರು ಸಂಜೆ ಕಾಲೇಜು ,ಡಾ. ನಾರಾಯಣಸ್ವಾಮಿ ಕೆ, ಸಂಚಾಲಕರು ಐಕ್ಯೂಎಸಿ, ಶ್ರೀಮತಿ ಗೀತಾದೇವಿ.ಟಿ. ಪತ್ರಾಂಕಿತ ವ್ಯವಸ್ಥಾಪಕರು, ಅಧ್ಯಕ್ಷತೆಯನ್ನು ಪ್ರೊ. ಅಂಜನಪ್ಪ ಎಸ್. ಆರ್.ಪ್ರಾಂಶುಪಾಲರು, ವಹಿಸಲಿದ್ದಾರೆ, ಎಂದು ಪ್ರೊ. ಭೀಮಣ್ಣ ಸುಣಗಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.