ಮಕ್ಕಳ ಭವಿಷ್ಯಕ್ಕಾಗಿ ಎಲ್ಲರೂ ಶ್ರಮ ವಹಿಸಬೇಕಿದೆ – ಮೊಹಮ್ಮದ್ ಜಿಕ್ರಿಯಾ

ದಾವಣಗೆರೆ : ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಹಾಗೂ ಶಿಕ್ಷಕರೊಂದಿಗೆ ಎಲ್ಲರೂ ಕೈಜೋಡಿಸುವುದು ಅಗತ್ಯವಾಗಿದೆ ಎಂದು ಜವಾಹರ್ ಬಾಲ್ ಮಂಚ್ ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಅಭಿಪ್ರಾಯ ಪಟ್ಟಿದ್ದಾರೆ.
ಜವಾಹರ್ ಬಾಲ್ ಮಂಚ್ ದಾವಣಗೆರೆ ಜಿಲ್ಲಾ ಸಮಿತಿವತಿಂದ ಇಂದು ನಿಟ್ಟುವಳ್ಳಿಯ ಶ್ರೀ ಸರ್ವಜ್ಞ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬಡ ಮಕ್ಕಳಿಗೆ ಉಚಿತ ನೋಟ್ ಬುಕ್ ಹಾಗೂ ಇನ್ನಿತರೆ ಅಗತ್ಯ ವಸ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳ ಭವಿಷ್ಯದ ಬಗ್ಗೆ ಕೇವಲ ಪೋಷಕರು ಹಾಗೂ ಶಿಕ್ಷಕರಲ್ಲದೆ ಸಾರ್ವಜನಿಕರಾದ ನಾವೂ ಸಹ ಅವರೊಂದಿಗೆ ಕೈಜೋಡಿಸಿ ಅವರ ಏಳ್ಗೆಗಾಗಿ ಶ್ರಮಿಸಬೇಕಿದೆ ಹಲವಾರು ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಮನೆಯ ಕಷ್ಟಗಳನ್ನು ನೋಡಿ ತಮ್ಮ ವಿದ್ಯಾಭ್ಯಾಸ ಮೊಟಕುಗೊಳಿಸಿರುವುದನ್ನು ನಾವು ನೋಡಿದ್ದೇವೆ ಅಂಥಾ ಮಕ್ಕಳಿಗೆ ನಾವು ನಮ್ಮ ಕೈಲಾದ ಸಹಾಯ ಮಾಡಿದರೆ ಮುಂದೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಆದ್ದರಿಂದ ಅಂಥಾ ಪ್ರತಿಭಾವಂತ ಮಕ್ಕಳ ಜವಾಬ್ದಾರಿಯನ್ನು ಸಾರ್ವಜನಿಕರು ವಹಿಸಿಕೊಳ್ಳಬೇಕು ಹಾಗೂ ಅವರ ಉಜ್ವಲ ಭವಿಷ್ಯಕ್ಕಾಗಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪದಾಧಿಕಾರಿಗಳಾದ ಸಲ್ಮಾ ಬಾನು ಮಾತನಾಡಿ ಇತ್ತೀಚೆಗೆ ಬಡತನದಿಂದಾಗಿ ಪ್ರತಿವರ್ಷ ಅನೇಕ ಮಕ್ಕಳು ಶಾಖೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಅಂಥಾ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಸಹಾಯಕ್ಕೆ ಸಂಘ ಸಂಸ್ಥೆಗಳು,ಎನ್ ಜಿ.ಓ ಗಳು ಬರಬೇಕು ಇದರಿಂದಾಗಿ ಮಕ್ಕಳು ಶಿಕ್ಷಣ ವಂಚಿತರಾಗುವುದನ್ನು ತಡೆಗಟ್ಟಬಹುದು ಎಂದು ಅಭಿಪ್ರಾಯಪಟ್ಟರು.
ಇನ್ನೋರ್ವ ಪದಾಧಿಕಾರಿ ಹಾಗೂ ವಕೀಲರಾದ ಪ್ರೇಮ ಅವರು ಮಾತನಾಡಿ ಬಡ ಶಿಕ್ಷಣ ವಂಚಿತರಾಗಿರುವ ಮಕ್ಕಳ ಬಗ್ಗೆ ಸರ್ಕಾರ ಗಮನ ಹರಿಸಿ ಅಂಥಾ ಮಕ್ಕಳಿಗೆ ವಿಶೇಷ ಕಾರ್ಯಕ್ರಮ ರೂಪಿಸಬೇಕು ಎಂದು ಮನವಿಮಾಡಿದರು.
ಈ ಸಂಧರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಶಿಲ್ಪ ಪರಶುರಾಮ್,ಸಿದ್ದೇಶ್ ಹೊನ್ನಳ್ಳಿ,ಫಯಾಜ್ ಅಹ್ಮದ್,ರೂಪ ಡಿ,ವೀರೇಶ್,ಉಮರ್, ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ಸುರೇಶ್,ಸಹ ಶಿಕ್ಷಕರಾದ ಜಗದೀಶ್,ವಿಶ್ವನಾಥ್,ನಾಗರಾಜ್,ಪದ್ಮಾವತಿ ಹಾಜರಿದ್ದರು.