ಆರೋಗ್ಯ : ಬೆಳಗ್ಗೆ ಎದ್ದಕೂಡಲೆ ನೀರು, ಊಟದ ಕೊನಗೆ ಮಜ್ಜಿಗೆ ಮತ್ತು ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ಆಧ್ಯಾತ್ಮಿಕ ದೃಷ್ಟಿಕೋನದ ಮಹತ್ವ ಇಲ್ಲಿದೆ.
ದಿನಾಂತೇ ಚ ಪಿಬೇದ್ ದುಗ್ಧಂ ನಿಶಾಂತೇ ಚ
ಪಿಬೇತ್ವಯಃ |
ಭೋಜನಾಂತೇ ಪಿಬೇತ್ತಕಂ ಕಿಂ ವೈದ್ಯಸ್ಯ
ಪ್ರಯೋಜನಮ್ || – ಸುಭಾಷಿತ
ಅರ್ಥ : ಸಾಯಂಕಾಲ ( ಅಂದರೆ ಮಲಗುವ ಮುನ್ನ ) ಹಾಲು ಕುಡಿಯಬೇಕು ಬೆಳಗ್ಗೆ (ಎದ್ದ ಮೇಲೆ ಮುಖ ತೊಳೆದುಕೊಂಡು) ನೀರು ಕುಡಿಯಬೇಕು , ಊಟದ ಕೊನೆಯಲ್ಲಿ ಮಜ್ಜಿಗೆ ಕುಡಿಯಬೇಕು: ಹೀಗೆ ಮಾಡಿದರೆ ವೈದ್ಯನಿಗೇನು ಕೆಲಸ ?
ಬೆಳಗ್ಗೆ ಎದ್ದ ನಂತರ ನೀರು ಕುಡಿಯುವುದು : ಬೆಳಗ್ಗೆ ಎದ್ದ ಕೂಡಲೆ ಅಂದರೆ ಮುಖ ತೊಳೆದ ನಂತರ ನೀರು ಕುಡಿಯಬೇಕು. ಏಕೆಂದರೆ ನೀರು ಹೇಗೆ ಪುಣ್ಯಕಾರಕವೊ ಹಾಗೆಯೇ ಪಾಪನಾಶಕವೂ ಹೌದು. ರಾತ್ರಿಯ ರಜ-ತಮಾತ್ಮಕ ವಾಯುಮಂಡಲದಲ್ಲಿ ದೇಹದ ಮೇಲಾಗುವ ಕೆಟ್ಟ ಶಕ್ತಿ ಗಳ ಸೂಕ್ಷ್ಮ ಆಕ್ರಮಣಗಳಿಂದ , ದೇಹ ಮತ್ತು ಬಾಯಿಯ ಟೊಳ್ಳು ರಜ-ತಮಾತ್ಮಕ ಗಳಿಂದ ಕೂಡಿರುತ್ತದೆ. ರಾತ್ರಿಯಿಡೀ ದೇಹದಲ್ಲಿ ಘನೀಕೃತವಾದ ಈ ರಜ-ತಮಾತ್ಮಕ ಪಾಪಲಹರಿಗಳ ನಿವಾರಣೆಗೆ ಸರ್ವಸಮಾವೇಶಕವಾಗಿರುವ ನಿರ್ಗುಣರೂಪಿ ನೀರನ್ನು ಕುಡಿಯಬೇಕು.
ಊಟದ ಕೊನೆಯಲ್ಲಿ ಮಜ್ಜಿಗೆಯನ್ನು ಕುಡಿಯುವುದು : ಮಜ್ಜಿಗೆಯು ರಜೋಗುಣದ ಲಹರಿಗಳಿಂದ ಕೂಡಿರುತ್ತದೆ, ಆದುದರಿಂದ ಅದು ಕೃತಿದರ್ಶಕ ಚಲನವಲನಕ್ಕೆ ಗತಿ ನೀಡುತ್ತದೆ. ಮಜ್ಜಿಗೆಯಲ್ಲಿನ ರಜೋಗುಣವು ಆಹಾರದ ಜೀರ್ಣಪ್ರಕ್ರಿಯೆಗೆ ವೇಗವನ್ನು ದೊರಕಿಸಿಕೊಡುತ್ತದೆ ಮತ್ತು ಆಹಾರದಿಂದ ನಿರ್ಮಾಣವಾಗುವ ಇಂಧನವನ್ನು (ಶಕ್ತಿಯನ್ನು) ದೇಹದ ಕಾರ್ಯಕ್ಕೆ ಪೂರೈಸುತ್ತದೆ ಅಥವಾ ಆವಶ್ಯಕತೆಗನುಸಾರ ಆಯಾಯ ಜಾಗಗಳಲ್ಲಿ ಘನೀಕರಿಸುತ್ತದೆ. ರಜೋಗುಣದಿಂದ ಕಾರ್ಯ ವೃದ್ಧಿಯಾಗುವುದರಿಂದ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡಿ ನಮ್ಮ ಕೆಲಸ ಕಾರ್ಯಕ್ಕೆ ರಜೋಗುಣಿ ಶಕ್ತಿಯನ್ನು ಪೂರೈಸಿ ದಿನವಿಡೀ ಉತ್ಸಾಹವನ್ನು ಉಳಿಸುವ ಮಜ್ಜಿಗೆಗೆ ಊಟದ ನಂತರದ ಮಹತ್ವದ ಸ್ಥಾನವನ್ನು ನೀಡಲಾಗಿದೆ.
ಸಾಯಂಕಾಲ (ಮಲಗುವ ಮೊದಲು) ಹಾಲು ಕುಡಿಯುವುದು : ಸಾಯಂಕಾಲದ ಸಮಯದಲ್ಲಿ ವಾಯುಮಂಡಲದಲ್ಲಿ ರಜ-ತಮಾತ್ಮಕ ಲಹರಿಗಳ ಪ್ರವಾಹದ ಮಾಧ್ಯಮದಿಂದ ಅನೇಕ ಕೆಟ್ಟ ಶಕ್ತಿಗಳ ಆಗಮನವಾಗುತ್ತಿರುತ್ತದೆ. ರಾತ್ರಿಯ ಸಮಯದಲ್ಲಿ ಕೆಟ್ಟ ಶಕ್ತಿಗಳ ರಜ-ತಮಾತ್ಮಕ ಕಾರ್ಯವು ನಡೆದಿರುತ್ತದೆ; ಆದುದರಿಂದ ಈ ಸಮಯದಲ್ಲಿ ಸಗುಣತತ್ತ್ವರೂಪಿ ಚೈತನ್ಯದ ಸ್ರೋತವಾಗಿರುವ ಹಾಲನ್ನು ಕುಡಿದರೆ, ಈ ರಜ-ತಮಾತ್ಮಕ ಕೆಟ್ಟ ಶಕ್ತಿಗಳ ಪ್ರಭಾವದಿಂದ ಜೀವದ ರಕ್ಷಣೆಯಾಗುತ್ತದೆ. ಆದುದರಿಂದ ಈ ಸಮಯದಲ್ಲಿ ಹಾಲು ಕುಡಿಯಬೇಕೆಂದು ತಿಳಿಸಲಾಗಿದೆ.
(ಆಧಾರ: ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಆಹಾರದ ನಿಯಮಗಳು ಮತ್ತುಆಧುನಿಕ ಆಹಾರದ ಹಾನಿಗಳು’)
