ಮಹಿಳೆ ಕಾಣೆ : ಪತ್ತೆಗೆ ಮನವಿ

ದಾವಣಗೆರೆ; ಹರಿಹರ ತಾಲ್ಲೂಕಿನ ಸಂಕ್ಲೀಪುರ ಗ್ರಾಮ ವಾಸಿಯಾದ 23 ವರ್ಷ ವಯಸ್ಸಿನ ಶ್ರೀಮತಿ ಪೂಜಾ ಟಿ.ಎಸ್ (ಕುರುಬ ಜನಾಂಗ) ಎಂಬ ಮಹಿಳೆ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಲು ದಾವಣಗೆರೆ ಬಡಾವಣೆ ಪೋಲಿಸ್ ಆರಕ್ಷಕ ನಿರೀಕ್ಷಕರು ಮನವಿ ಮಾಡಿದ್ದಾರೆ.
ತಾಲ್ಲೂಕಿನ ಸಂಕ್ಲೀಪುರ ಗ್ರಾಮ ವಾಸಿಯಾದ 23 ವರ್ಷ ವಯಸ್ಸಿನ ಶ್ರೀಮತಿ ಪೂಜಾ ಟಿ.ಎಸ್ ಅವರ ದೊಡ್ಡಮ್ಮ ರೇಣುಕಮ್ಮ ಇವರ ಮನೆಗೆ ವರಮಹಾಲಕ್ಷ್ಮೀ ಹಬ್ಬಕ್ಕೆ ಹೋಗಲು ಪತಿಯಾದ ರುದ್ರಪ್ಪ. ಟಿ ತಂದೆ ತಿಪ್ಪಣ್ಣ 2021 ರ ಆಗಸ್ಟ್ 20 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಹೈಸ್ಕೂಲ್ ಮೈದಾನದಲ್ಲಿರುವ ಖಾಸಗ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿಸಿದ್ದು, ಪತ್ನಿ ಪೂಜಾ ಟಿ.ಎಸ್ ದೊಡ್ಡಮ್ಮನ ಮನೆಗೂ ಹೋಗದೆ, ವಾಪಸ್ ಮನೆಗೂ ಬಂದಿರುವುದಿಲ್ಲ ಎಂದು ಕಾಣೆಯಾದ ಬಗ್ಗೆ ದೂರು ದಾಖಲಾಗಿರುತ್ತದೆ.
4.8 ಅಡಿ ಎತ್ತರ, ಉದ್ದ ಮುಖ, ಹಾಗೂ ಗೋಧಿ ಬಣ್ಣ ಹೊಂದಿದವರಾಗಿದ್ದು, ಮೈ ಮೇಲೆ ನೀಲಿ ಬಣ್ಣದ ಸ್ವೆಟ್ಟರ್ ಕೆಂಪು ಬಣ್ಣದ ಹೂವಿನ ಚಿತ್ರವಿರುವ ಚೂಡಿದಾರ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ.
ಮೇಲ್ಕಂಡ ಚಹರೆಯುಳ್ಳ ಮಹಿಳೆ ಪತ್ತೆ ಅಥವಾ ಮಾಹಿತಿ ದೊರೆತಲ್ಲಿ ಬಡಾವಣೆ ಪೋಲಿಸ್ ಠಾಣೆ ಫೋನ್ ನಂ-08192-2720212, ಡಿವೈಎಸ್‍ಪಿ ನಗರ ಕಚೇರಿ-08192-259213, ಎಸ್‍ಪಿ ಕಚೇರಿ-08192-253400 ಹಾಗೂ ಕಂಟ್ರೋಲ್ ರೂಂ, ದಾವಣಗೆರೆ-08192-253100 ಗೆ ಮಾಹಿತಿ ನೀಡಲು ತಿಳಿಸಲಾಗಿದೆ.