ಲೋಕಲ್ ಸುದ್ದಿ

Yoga : “ಮಾತು ಬಲ್ಲವನಿಗೆ ಜಗಳವಿಲ್ಲ, ಯೋಗ ಬಲ್ಲವರಿಗೆ ರೋಗವಿಲ್ಲ”.– ಕೆ ಜಿ ರೇವಣಸಿದ್ದಪ್ಪ ಗೌಡ್ರು ಕುರ್ಕಿ

"ಮಾತು ಬಲ್ಲವನಿಗೆ ಜಗಳವಿಲ್ಲ, ಯೋಗ ಬಲ್ಲವರಿಗೆ ರೋಗವಿಲ್ಲ".-- ಕೆ ಜಿ ರೇವಣಸಿದ್ದಪ್ಪ ಗೌಡ್ರು ಕುರ್ಕಿ
ದಾವಣಗೆರೆ : ಯೋಗ ಭಾರತೀಯ ಪರಂಪರೆಯ ಮೂಲ ಸತ್ವ. ಯೋಗದಿಂದ ಆರೋಗ್ಯ, ನೆಮ್ಮದಿ,ಶಾಂತಿ ಹಾಗೂ ಸಾಮಾಜಿಕ ಸ್ವಾಸ್ತ್ಯ ಕಾಪಾಡಬಹುದಾಗಿದೆ.*ಮಾತು ಬಲ್ಲವರಿಗೆ ಜಗಳವಿಲ್ಲ ಯೋಗ ಬಲ್ಲವರಿಗೆ ರೋಗವಿಲ್ಲ.* ಹಾಗಾಗಿ ಎಲ್ಲರೂ ದಿನನಿತ್ಯ ಯೋಗ ಮಾಡಿ ಎಂದು ಕುರ್ಕಿ ಕೆ ಜಿ ರೇವಣಸಿದ್ದಪ್ಪ ಗೌಡ್ರು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ಅವರು ಇಂದು ಕುರ್ಕಿ ಸರ್ಕಾರಿ ಪ್ರೌಢಶಾಲೆ ಯಲ್ಲಿ ಏರ್ಪಡಿಸಿದ್ದ 9 ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯೋಗದಿಂದ ನಿಮ್ಮ ಆರೋಗ್ಯ ಉತ್ತಮವಾಗುತ್ತದೆ. ಹಾಗೂ ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ ಮೂಡುತ್ತದೆ ಆದ್ದರಿಂದ ಪ್ರತಿಯೊಬ್ಬರು ಪ್ರತಿ ದಿನ ಅರ್ಧ ಗಂಟೆಯದರೂ ಯೋಗವನ್ನು ಮಾಡಿ ಎಂದು ವಿದ್ಯಾರ್ಥಿಗಳಿಗೆ ಕೆ ಜಿ ರೇವಣಸಿದ್ದಪ್ಪ ಗೌಡ್ರು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೆ ಜಿ ವೇದಮೂರ್ತಿಗೌಡ್ರು ಮಾತನಾಡಿ ಇಂದು ವಿಶ್ವಸಂಸ್ಥೆಯ ವೇದಿಕೆಯಲ್ಲಿ 9 ನೇ ವಿಶ್ವ ಯೋಗ ದಿನಾಚರಣೆಯಲ್ಲಿ ನಮ್ಮ ದೇಶದ ಪ್ರಧಾನಮಂತ್ರಿಯವರು ಭಾಗವಹಿಸಲಿದ್ದಾರೆ. ವಿಶ್ವದ 180 ರಾಷ್ಟ್ರಗಳ ಗಣ್ಯರು ಇದಕ್ಕೆ ಸಾಥ್ ನೀಡಲಿದ್ದಾರೆ,  ಯೋಗ ಎಂದು ಜಾಗತಿಕ ಮನ್ನಣೆಯನ್ನು ಗಳಿಸಿಕೊಂಡಿದೆ ಎಂದು ತಿಳಿಸಿದರು.
"ಮಾತು ಬಲ್ಲವನಿಗೆ ಜಗಳವಿಲ್ಲ, ಯೋಗ ಬಲ್ಲವರಿಗೆ ರೋಗವಿಲ್ಲ".-- ಕೆ ಜಿ ರೇವಣಸಿದ್ದಪ್ಪ ಗೌಡ್ರು ಕುರ್ಕಿ
ಅಧ್ಯಾಪಕ ಸಿ ಜಿ ಜಗದೀಶ್ ಕೂಲಂಬಿಯ ವರು ಪ್ರಾಸ್ತಾವಿಕ ನುಡಿಗಳಲ್ಲಿ 9ನೇ ವಿಶ್ವ ಯೋಗ ದಿನಾಚರಣೆಯಲ್ಲಿ ಇಂದು 25 ಕೋಟಿಗಳಿಗೂ ಅಧಿಕ ಜನ ಹಾಗೂ 180 ದೇಶಗಳ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ. ಇಂದು 9 ನೌಕಪಡೆ ಹಡಗು ಗಳಲ್ಲಿ  “ಓಷ್ಯನ್ ರಿಂಗ್ ಆಫ್ ಯೋಗ”ವನ್ನು ಹಾಗೂ 2 ಧ್ರುವ (ಉತ್ತರ ಮತ್ತು ದಕ್ಷಿಣ ) ಗಳಲ್ಲೂ ಯೋಗ ದಿನ ವನ್ನು ಆಚರಿಸಲಾಗುತ್ತಿದೆ. ಈ ವರ್ಷ ” ವಸುದೈವ ಕುಟುಂಬಕಂ ” ಎಂಬ ಘೋಷ ವಾಕ್ಯ ದಡಿ  9 ನೇ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕರಾದ ಗಣೇಶಾಚಾರಿ ಆರ್ ವಹಿಸಿದ್ದು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಯೋಗದಿಂದ ದೈಹಿಕ ಮತ್ತು ಮಾನಸಿಕ ನಿಯಂತ್ರಣ ಸಾಧ್ಯ. ಆರೋಗ್ಯವೇ ಭಾಗ್ಯ ಎನ್ನುವುದು ಈ ಯೋಗದಲ್ಲಿ ಅಡಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ ಜಿ ನಂದ್ಯಪ್ಪ, ಸದಸ್ಯರಾದ ಬಸಣ್ಣ, ಕೆ ವಿ ಓಂಕಾರಪ್ಪ, ಸದಸ್ಯರಾದ ಕೆ ಜೆ ನಾಗರಾಜ್ ರವರು ಎಲ್ಲರಿಗೂ ವಿಶ್ವ ಯೋಗ ದಿನದ ಶುಭ ಕೋರಿದರು.
ಶಾಲೆಯ ಶಿಕ್ಷಕರಾದ ಸಿ ಜಿ ಜಗದೀಶ್ ಕೂಲಂಬಿ,ಶ್ರೀಮತಿ ಶಾಂತಕುಮಾರಿ ಎಸ್,  ಎಂ ವಿ ಶಕುಂತಲಾ,ಪಾರ್ವತಮ್ಮ ಎಸ್ ಪ್ರಕಾಶ್ ಎಸ್, ರಾಘವೇಂದ್ರ ಎ ಆರ್, ವಿರುಪಾಕ್ಷಿ ಹೆಚ್ ಎಂ ಎನ್ ನಾಗರಾಜ್   ಭಾಗವಹಿಸಿದ್ದರು. ದೈಹಿಕ ಶಿಕ್ಷಕರಾದ ರಾಘವೇಂದ್ರ ರವರು ಸೂರ್ಯ ನಮಸ್ಕಾರ, ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ವಜ್ರಸನ, ಭುಜಂಗಾಸನ ಮತ್ತಿತರೆ ಯೋಗಾಸನಗಳನ್ನು ಮಕ್ಕಳಿಂದ ಮಾಡಿಸಿದರು. ಆರಂಭದಲ್ಲಿ ಎಂ ಎನ್ ನಾಗರಾಜ್ ಯೋಗ ಪ್ರಾರ್ಥನೆಯನ್ನು ನೆರವೇರಿಸಿದರು. ಎ ಆರ್ ರಾಘವೇಂದ್ರ ಸ್ವಾಗತಿಸಿ ನಿರೂಪಿಸಿದರು,ಸಿ ಜಿ ಜಗದೀಶ್ ಕೂಲಂಬಿ ವಂದಿಸಿದರು.
Click to comment

Leave a Reply

Your email address will not be published. Required fields are marked *

Most Popular

To Top