ತನ್ನ ಆಸ್ತಿ ಜಪ್ತಿಗೆ ಆದೇಶ- ಶಾಸಕ ಜನಾರ್ಧನ ರೆಡ್ಡಿ ಸ್ಪಷ್ಟನೆ

ತನ್ನ ಆಸ್ತಿ ಜಪ್ತಿಗೆ ಆದೇಶ- ಶಾಸಕ ಜನಾರ್ಧನ ರೆಡ್ಡಿ ಸ್ಪಷ್ಟನೆ

ಹಾಸನ(ಬೇಲೂರು):- ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸಂಸ್ಥಾಪಕ ಹಾಗೂ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಬೇಲೂರು ದೇಗುಲಕ್ಕೆ ಆಗಮಿಸಿ ಶಿಲ್ಪಕಲಾ ವೈಭವವನ್ನು ವೀಕ್ಷಿಸಿದರು.

ಇತ್ತೀಚಿನ ಬಿಜೆಪಿ ಪಕ್ಷದಲ್ಲಿ ನಾವೇ ಹಿಂದುತ್ವವಾದಿ ಎಂಬ ಮುಖವಾಡವನ್ನು ಹಾಕಿಕೊಂಡು ಜನತಗೆ ಸುಳ್ಳು ಭರವಸೆಗಳನ್ನು ನೀಡುತ್ತಿರುವ ಇಂದಿನ ಬಿಜೆಪಿ ಪಕ್ಷದಲ್ಲಿನ ಯಾವುದೇ ತತ್ವ ಸಿದ್ದಾಂತವಿಲ್ಲದ ಬಿಜೆಪಿಗೆ ಮುಂದಿನ ದಿನದಲ್ಲಿ ಭವಿಷ್ಯವಿಲ್ಲ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸಂಸ್ಥಾಪಕ ಹಾಗೂ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭವಿಷ್ಯ ನುಡಿದರು.

ತನ್ನ ಆಸ್ತಿ ಜಪ್ತಿಗೆ ಆದೇಶ- ಶಾಸಕ ಜನಾರ್ಧನ ರೆಡ್ಡಿ ಸ್ಪಷ್ಟನೆ

ಈ ಹಿಂದಿನ ಬಿಜೆಪಿ ಮತ್ತು ಇತ್ತೀಚಿನ ಬಿಜೆಪಿಗೆ ವೈತ್ಯಾಸವಿದೆ. ಪಕ್ಷಕ್ಕಾಗಿ ತ್ಯಾಗ್ಯ ಮಾಡಿದವರಿಗೆ ಮನ್ನಣೆ ನೀಡುವ ಕಾಲದಲ್ಲಿ ಬಿಜೆಪಿಗೆ ಜನರು ಕೂಡ ಬೆಂಬಲ ನೀಡುತ್ತಾ ಬಂದಿದ್ದಾರೆ. ಆದರೆ ಹಿರಿಯರನ್ನು ನಿರ್ಲಕ್ಷ್ಯ ವಹಿಸಿದವರಿಗೆ ಜನತೆ ತಕ್ಕ ಉತ್ತರ ನೀಡಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಕಟ್ಟಿದ್ದು, ಬಿಜೆಪಿ ಪಕ್ಷದ ವಿರುದ್ದವಲ್ಲ, ರಾಜ್ಯದ ಜನತಗೆ ಸದೃಡ ಮತ್ತು ಪಾರದರ್ಶಕ ಆಡಳಿತವನ್ನು ನೀಡಲು ಅಣ್ಣ ಬಸವಣ್ಣನವರ ಆಶೋತ್ತರಗಳಂತೆ ಹೊಸ ಪಕ್ಷವನ್ನು ಸ್ಥಾಪಿಸಲಾಗಿದೆ.

ಇದೇ ಆಗಸ್ಟ್ ನಿಂದ ಇಡೀ ರಾಜ್ಯಾಧ್ಯಂತ ಪಕ್ಷವನ್ನು ಸಂಘಟನೆಗೆ ಒತ್ತು ನೀಡಲು ನಿರ್ಧರಿಸಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೂಡ ಸಂಘಟನೆ ನಡೆಸಲಾಗುತ್ತದೆ. ಅಲ್ಲದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಖಂಡಿತ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಪರ್ಧಿಸಲಿದೆ. ಜನತೆ ಕೂಡ ಪ್ರಾದೇಶಿಕವಾದ ಹೊಸ ಪಕ್ಷಕ್ಕೆ ಹೆಚ್ಚಿನ ಬೆಂಬಲ ನೀಡುತ್ತಿರುವ ಬಗ್ಗೆ ತಿಳಿಸಿದರು.

ರಾಜ್ಯದಲ್ಲಿ ಉಚಿತ ಭಾಗ್ಯಗಳೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ತಾನು ನೀಡಿದ ಗ್ಯಾರಂಟಿಗಳನ್ನು ಸಂಪೂರ್ಣವಾಗಿ ನೀಡದೆ ಜನತೆಯನ್ನು ಗೊಂದಲಕ್ಕೆ ಸಿಲಿಕಿಸಿದೆ. ಚುನಾವಣೆ ಪೂರ್ವ ಅವರ ಮಾತುಗಳಿಗೂ ಇಂದಿನ ಮಾತಿಗೂ ಅಂತರವಿದೆ. ಮುಖ್ಯಮಂತ್ರಿಗಳು ಅನುಭವಿ ರಾಜಕಾರಣಿಯಾದ ನಿಟ್ಟಿನಲ್ಲಿ ಯಾಥವತ್ತಾಗಿ ಐದು ಗ್ಯಾರಂಟಿಗಳನ್ನು ಜನತೆಗೆ ನೀಡಬೇಕು ಎಂದು ಆಗ್ರಹಿಸಿದರು.

ಕಳೆದ ಮೂರು ದಿನದಿಂದ ಹಾಸನ-ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಚಾರವನ್ನು ಹಮ್ಮಿಕೊಂಡಿದ್ದು, ಐತಿಹಾಸಿಕ ಮತ್ತು ಧಾರ್ಮಿಕ ದೇಗುಲಕ್ಕೆ ಭೇಟಿ ನೀಡುತ್ತಿರುವೆ.ಬೇಲೂರಿಗೆ ಈಗಾಗಲೇ ಮೂರು ಭಾರಿ ಬಂದಿರುವೆ. ಸದ್ಯ ಕುಟುಂಬ ಸಮೇತವಾಗಿ ಬಂದಿರುವೆ. ಬೇಲೂರು ಚನ್ನಕೇಶವ ದೇಗುಲದ ಐತಿಹಾಸಿಕ ಹಿನ್ನಲೆಯನ್ನು ತಿಳಿದಿರುವ ಬಗ್ಗೆ ಹೇಳಿದರು.

ರೆಡ್ಡಿ ಆಸ್ತಿ ಜಪ್ತಿಗೆ ಆದೇಶರೆಡ್ಡಿ ಸ್ಪಷ್ಟನೆ

ನನ್ನ ಮೇಲೆ ಪ್ರಕರಣ ದಾಖಲಾದ ಸಂದರ್ಭದಲ್ಲಿ ಒಟ್ಟು ೧೫೨ ಆಸ್ತಿಗಳ ಪೈಕಿ ೮೦ ಆಸ್ತಿಗಳನ್ನು ಜಪ್ತಿಗೆ ಆದೇಶವಿದೆ. ಈ ಆದೇಶದ ಪ್ರಕಾರ ಪ್ರಕರಣ ಇತ್ಯರ್ಥವಾಗುವ ತನಕ ಈ ಆಸ್ತಿಗಳನ್ನು ಮಾರಾಟಕ್ಕೆ ಅವಕಾಶವಿಲ್ಲ ಉಳಿದಂತೆ ಪ್ರಕರಣ ಸದ್ಯದಲ್ಲಿ ಸಿಬಿಐ ನ್ಯಾಯಾಲಯದಲ್ಲಿ ನಡೆಯುತ್ತಿದೆ ಎಂದು ಜನಾರ್ದನ ರೆಡ್ಡಿ ಸ್ಪಷ್ಟನೆ ನೀಡಿದರು.

 

 

Leave a Reply

Your email address will not be published. Required fields are marked *

error: Content is protected !!