ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ವಂಚಿತರಾದವರಿಗೆ ಹಣಪಾವತಿ ಮಾಡುವಂತೆ ಮನವಿ

ದಾವಣಗೆರೆ:- ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ವಿವಿಧ ಹಣಕಾಸು ಸಂಸ್ಥೆಗಳಲ್ಲಿಹೂಡಿಗೆ ಮಾಡಿ ವಂಚನೆಗೊಳಗಾದ ಸಂತ್ರಸ್ಥರಿಗೆ ಹೂಡಿಕೆದಾರ ಹಿತಾಸಕ್ತಿ ಅಡಿ ಹಣ ಪಾವತಿಗಾಗಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ.
ದಾವಣಗೆರೆ ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ವಿವಿಧ ಹಣಕಾಸು ಸಂಸ್ಥೆ ಹಾಗೂ ಕಂಪನಿಗಳಲ್ಲಿ ಅನಿಯಂತ್ರಿತ ಠೇವಣಿ ಯೋಜನೆಗಳ ಅಡಿ ನಾಗರಿಕರು ಹೂಡಿಕೆದಾರರು ಹಣ ಹೂಡಿಕೆ ಮಾಡಿದ್ದಾರೆ.
ಪಿಐಸಿಎಲ್, ಪರ್ಲ್ಸ್, ಗ್ರೀನ್ ಬಡ್ಸ್, ಹಿಂದೂಸ್ತಾನ, ಇನ್ಪ್ರಾಕಾನ್, ಪಂಚವಟಿ ಮಲ್ಟಿ ಸ್ಟೇಟ್ ಕೋ ಆಪರ್ಟಿವ್ ಕ್ರೆಟಿಡ್ ಸೊಸೈಟಿ ಸೇರಿದಂತೆ ನೂರಾರು ಹಣಕಾಸು ಸಂಸ್ಥೆಗಳಲ್ಲಿ ವಿವಿಧ ಯೋಜನೆಗಳ ಮೂಲಕ ಹಣಸಂಗ್ರಹಿಸಿ ಲಕ್ಷಾಂತರ ರೂಪಾಯಿ ವಂಚಿಸಿ ಇದೀಗ ಆ ಕಂಪನಿಗಳು ಪಲಾಯನ ಮಾಡಿದ್ದಾರೆ.
ಇದೇ ರೀತಿ ಸುಮಾರು 5 ಲಕ್ಷ ಭಾರತೀಯ ನಾಗರಿಕರು ಹಾಗೂ 1200 ಕ್ಕೂ ಹೆಚ್ಚು ಕರ್ತವ್ಯ ನಿರತ ಸೈನಿಕರು ತಮ್ಮ ದುಡಿಮೆ ಹಣವನ್ನು ಮರಳಿ ಪಡೆಯದೇ ಮಾನಸಿಕವಾಗಿ ಕುಂದಿಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಂಚನೆಗೊಳಗಾದ ಸಂತ್ರಸ್ಥರಿಗೆ ಹೂಡಿಕೆದಾರ ಹಿತಾಸಕ್ತಿ ಅಡಿ ಹಣ ಪಾವತಿ ಮಾಡುವಂತೆ ಮನವಿ ಪತ್ರದಲ್ಲಿ ತಿಳಿಸಲಾಗಿದೆ.