ದಾವಣಗೆರೆ: ಸಾಣೇಹಳ್ಳಿ ಇಲ್ಲಿನ ಶ್ರೀ ಮಠಕ್ಕೆ ಕರ್ನಾಟಕ ಸರಕಾರದ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ ಅವರು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗ್ರಾಮಸ್ಥರು ರಾಗಿಯ ಹಣ ರೈತರಿಗೆ ಇನ್ನೂ ಬಾರದಿರುವ ಬಗ್ಗೆ, ತೆಂಗಿನ ಬೆಲೆ ಕುಸಿದಿರುವ ಬಗ್ಗೆ, ಶ್ರೀಗಂಧ ಬೆಳೆ ಕಟಾವಿಗೆ ಅನುಮತಿಯಬಗ್ಗೆ, ತೆಂಗಿಗೆ ತಗುಲಿರುವ ರೋಗದ ಬಗ್ಗೆ, ಭದ್ರಾಮೇಲ್ದಂಡೆ ಯೋಜನೆಯನ್ನು ತೀವ್ರಗೊಳಿಸುವ ಬಗ್ಗೆ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಸಮಾಲೋಚಿಸಿದರು.
ಇವುಗಳನ್ನು ಗಮನದಲ್ಲಿಟ್ಟುಕೊಂಡು ಸದನದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದರು. ಪಂಡಿತಾರಾಧ್ಯ ಶ್ರೀ ಗಳು ಜನ ಮೆಚ್ಚುವ ರೀತಿಯಲ್ಲಿ ಆಡಳಿತ ನೀಡುವಂತೆ ಮಾರ್ಗದರ್ಶನ ನೀಡಿದರು.
