ಸಿದ್ದಗಂಗಾ ಶಾಲೆಯ ಮುಖ್ಯಸ್ಥೆ ಜಸ್ಟೀನ್ ಡಿ’ಸೌಜ ಗೆ ವರ್ಷದ ವ್ಯಕ್ತಿ ಪ್ರಶಸ್ತಿ ಗರಿಮೆ: ಜ.2 ರಂದು ಪ್ರಶಸ್ತಿ ಪ್ರದಾನ
ದಾವಣಗೆರೆ: ಜಿಲ್ಲೆ ಸಮಾಚಾರ ಬಳಗದಿಂದ 2021ರ ವರ್ಷದ ವ್ಯಕ್ತಿ ಪ್ರಶಸ್ತಿ
ಪ್ರದಾನ ಸಮಾರಂಭ ಜನವರಿ 2 ರಂದು ಸಂಜೆ 6 ಗಂಟೆಗೆ ನಗರದ ಸಿದ್ಧಗಂಗಾ
ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಬಳಗದ ಸಾಲಿಗ್ರಾಮ ಗಣೇಶ ಶೆಣೈ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ
ನೂತನ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಕಾರ್ಯಕ್ರಮ ಉದ್ಘಾಟಿಸಿ,
ಪ್ರಶಸ್ತಿ ಪ್ರದಾನ ಮಾಡುವರು. ಕಾರ್ಯಕ್ರಮದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿನ ಗಣನೀಯ
ಸೇವೆಗಾಗಿ 2021ರ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಸಿದ್ಧಗಂಗಾ ವಿದ್ಯಾಸಂಸ್ಥೆಯ
ಜಸ್ಟಿನ್ ಡಿ’ಸೌಜಾ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.
ಉದ್ಯಮಿ ಎ.ಎಸ್.ವೀರಣ್ಣ ಅಧ್ಯಕ್ಷತೆ
ವಹಿಸುವರು. ಬಳಗದ ಗೌರವಾಧ್ಯಕ್ಷರಾದ ಡಾ.ಈಶ್ವರಶರ್ಮ, ಅಧ್ಯಕ್ಷೆ
ಸತ್ಯಭಾಮ ಮಂಜುನಾಥ್, ಸಂಸ್ಥಾಪಕ ವಿ.ಹನುಮಂತಪ್ಪ ಉಪಸ್ಥಿತರಿರುವರು.
ಕಾರ್ಯಕ್ರಮಕ್ಕೂ ಮುನ್ನ ಸಂಜೆ 5.30ಕ್ಕೆ ಸಮೂಹ ಕನ್ನಡ ಗಾನ, ನೃತ್ಯ
ರೂಪಕ ನಡೆಯಲಿದೆ ಎಂದು ತಿಳಿಸಿದರು.
ಬಳಗದ ಡಾ.ಸಿ.ಕೆ.ಆನಂದತೀರ್ಥಾಚಾರ್, ಸತ್ಯಭಾಮ ಮಂಜುನಾಥ್, ಶೈಲಜಾ,
ಭಾರತಿ ಸುದ್ದಿಗೋಷ್ಠಿಯಲ್ಲಿದ್ದರು.