ಲೋಕಲ್ ಸುದ್ದಿ

11-12ರಂದು ಸಾವಯವ ತಜ್ಞರ ಚಿಂತನ-ಮಂಥನ

ದಾವಣಗೆರೆ: ಸುಸ್ಥಿರ ಕರ್ನಾಟಕ ಬಳಗದಿಂದ ಫೆಬ್ರುವರಿ 11, 12ರಂದು ಸಾವಯವ ತಜ್ಞರ ಚಿಂತನ-ಮಂಥನ ಸಭೆಯನ್ನು ರಾಣೆಬೆನ್ನೂರು ತಾಲ್ಲೂಕಿನ ಮುದೇನೂರಿನ ಪ್ರಗತಿಪರ ರೈತ ಶಂಕರಗೌಡ್ರ ತೋಟದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು  ಗುರುವಾರ ಸುದ್ದಿಗೋಷ್ಠಿಯಲ್ಲಿ ಮಹಿಮಾ ಪಟೇಲ್ ತಿಳಿಸಿದರು.
ರಾಜ್ಯದಲ್ಲಿ ಕೆಲವರು ಒಳ್ಳೆಯ ಸಮಾಜ, ರಾಜಕಾರಣ, ಆರೋಗ್ಯ, ಆಡಳಿತ, ಹಣಕಾಸಿನ ವ್ಯವಸ್ಥೆ ಸೇರಿದಂತೆ ಎಲ್ಲಾ ರಂಗಗಳಲ್ಲೂ ಸಾವಯವ ಚಿಂತನೆ ತರುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ತಜ್ಞರ ಒಡನಾಟದಲ್ಲಿ ಚಿಂತನ ಮಂಥನ ಸಭೆ ನಡೆಸಲಾಗುವುದು. ಶಂಕರಗೌಡ್ರು, ರಾಘವ, ಬಾ. ಸಂಜೀವ್ ಕುಲಕರ್ಣಿ, ಚುಕ್ಕಿ ನಂಜುಂಡಸ್ವಾಮಿ, ನಂದಿನಿ ಜಯರಾಂ, ಕೆ.ಟಿ. ಗಂಗಾಧರ್ ಭಾಗವಹಿಸಲಿದ್ದಾರೆ ಎಂದರು.
ಐಕಾಂತಿಕಾದ ರಾಘವ ಮಾತನಾಡಿ, ತಾಂತ್ರಿಕತೆ, ಜಾಗತಿಕ ಹಾಗೂ ಆಧುನಿಕತೆ ಹೆಸರಿನಿಂದ ನಾವು ಎಲ್ಲಾ ರಂಗಗಳಲ್ಲೂ ಕೃತಕ ಜೀವನ ನಡೆಸುತ್ತಿದ್ದು, ಅದನ್ನು ಬಿಟ್ಟು ನಮ್ಮ ಸಾವಯವ ಬದುಕಿಗೆ ಮರಳೋಣ ಎನ್ನುವ ಉದ್ದೇಶದಿಂದ ಈ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!