ಆರೋಗ್ಯ

ದೇಶಾದ್ಯಂತ ಒಂದೇ ದಿನ 11,692 ಕೋವಿಡ್ ಕೇಸ್ , 28 ಸಾವು

ದೇಶಾದ್ಯಂತ ಒಂದೇ ದಿನ 11,692 ಕೋವಿಡ್ ಕೇಸ್ , 28 ಸಾವು

ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ ಕೋವಿಡ್‌ ದೃಢಪಟ್ಟ 11,692 ಹೊಸ ಪ್ರಕರಣಗಳು ಭಾರತದಲ್ಲಿ ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 66,170ಕ್ಕೆ ಏರಿದೆ.
ಕೋವಿಡ್‌ ಕಾರಣದ 28 ಸಾವುಗಳು ಸಂಭವಿಸಿದ್ದು, ಕೇರಳವೊಂದರಲ್ಲೇ 9 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 5,31,258ಕ್ಕೆ ತಲುಪಿದೆ.
ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ 4.48 ಕೋಟಿ (4,48,69,684)ಗೆ ತಲುಪಿದೆ ಎಂಬುದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿಯಿಂದ ಗೊತ್ತಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 4,42,72,256 ಕ್ಕೆ ಏರಿದೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!