ದಾವಣಗೆರೆಯಲ್ಲಿ ಇಂದು 15 ಕೋವಿಡ್ ಕೇಸ್ ದಾಖಲು ಜಿಲ್ಲೆಯಲ್ಲಿ ಒಟ್ಟು 58

ದಾವಣಗೆರೆ: ದೇಶದಲ್ಲಿ ಒಂದೇ ದಿನ 5,888 ಕೋವಿಡ್ ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸೋಮವಾರ ಪ್ರಕಟಿಸಿದೆ.
ಈ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯಲ್ಲಿ ಇಂದು ಒಟ್ಟು 15 ಕೋವಿಡ್ ಕೇಸ್ ದಾಖಲಾಗಿದ್ದು ಒಟ್ಟು 58 ಸಕ್ರಿಯ ಕೇಸ್ ದಾವಣಗೆರೆ ಜಿಲ್ಲೆಯಲ್ಲಿ ದಾಖಲಾತಿಯಾಗಿದೆ ಎಂದು ಆರೋಗ್ಯ ಇಲಾಖೆ ತನ್ನ ಡೈಲಿ ಬುಲೆಟಿನ್ ನಲ್ಲಿ ಮಾಹಿತಿ ತಿಳಿಸಿದೆ.
ಚನ್ನಗಿರಿ – 5
ದಾವಣಗೆರೆ- 14
ಹರಿಹರ -1
ಹೊನ್ನಾಳಿ -8
ಜಗಳೂರು -30
ಒಟ್ಟು -58
ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ ಭಾರತ ದೇಶದಲ್ಲಿ 35,199ಕ್ಕೆ ಏರಿಕೆಯಾಗಿದೆ.
ಸೋಂಕಿನಿಂದ 14 ಜನರು ಮೃತಪಟ್ಟ ವರದಿಯಾಗಿದೆ. ಇದರಲ್ಲಿ ದೆಹಲಿ, ಹಿಮಾಚಲ ಪ್ರದೇಶ, ಗುಜರಾತ್, ಜಮ್ಮು–ಕಾಶ್ಮೀರ, ಮಹಾರಾಷ್ಟ್ರ, ರಾಜಸ್ಥಾನ, ಕೇರಳದಲ್ಲಿ ಸಾವಿನ ಪ್ರಕರಣಗಳು ದಾಖಲಾಗಿದೆ.
ದೈನಂದಿನ ಕೋವಿಡ್ ಪಾಸಿಟಿವಿಟಿ ದರ ಶೇ 6.91ರಷ್ಟಿದ್ದು, ಮರಣ ಪ್ರಮಾಣ ಶೇ 1.1 ಆಗಿದೆ. ಹಾಗೂ, ಚೇತರಿಕೆ ಶೇ 98.73ರಷ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.