ಫೆಬ್ರವರಿ 15ಕ್ಕೆ ಜೆ.ಎಂ.ಇಮಾಂ ಜನ್ಮ ದಿನಾಚರಣೆ, ರಾಜ್ಯ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ

ರಾಜ್ಯ ಪ್ರಶಸ್ತಿ ಪ್ರದಾನ
ದಾವಣಗೆರೆ: ಜಗಳೂರು ಜೆ.ಎಂ.ಇಮಾಂ ಟ್ರಸ್ಟ್ ವತಿಯಿಂದ ಜಗಳೂರು ಮಹಮದ್ ಇಮಾಂ ಅವರ 125ನೇ ಜನ್ಮ ದಿನಾಚರಣೆ, ಜೆ.ಎಂ.ಇಮಾಂ ಸ್ಮಾರಕ ರಾಜ್ಯ ಪ್ರಶಸ್ತಿ ಪ್ರದಾನ ಹಾಗೂ ಅವರ ಮೈಸೂರು ಆಗ ಮತ್ತು ಈಗ 4ನೇ ಮುದ್ರಣದ ಪ್ರಸ್ತಕ ಬಿಡುಗಡೆ ಕಾರ್ಯಕ್ರಮ ಫೆಬ್ರವರಿ 15 ರಂದು ಬುಧವಾರ ಬೆಳಿಗ್ಗೆ 11ಕ್ಕೆ ಜಗಳೂರಿನ ಜೆ.ಎಂ.ಇಮಾಂ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಲಹಾ ಸಮಿತಿ ಅಧ್ಯಕ್ಷ ಎನ್.ಟಿ.ಎರ್ರಿಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಜಾನಪದ ವಿದ್ವಾಂಸ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಗಳೂರು ಶಾಸಕ ಎಸ್.ವಿ.ರಾಮಚಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಆಗಮಿಸಿಲಿದ್ದು, ಟ್ರಸ್ಟ್ ನ ಅಧ್ಯಕ್ಷ ಹಾಜಿ ಜೆ.ಕೆ.ಹುಸೇನ್ ಮಿಯ್ಯಾ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಡಾ.ರಹಮತ್ ತರೀಕೆರೆ ಅಭಿನಂದನಾ ನುಡಿಗಳನ್ನಾಡುವರು ಎಂದು ಹೇಳಿದರು.
ಲೇಖಕ ರಂಜಾನ್ ದರ್ಗಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಿ.ಟಿ.ಮೋಹನ್, ಜಲೀಲ್ ಸಾಬ್, ದಾದಾ ಖಲಂದರ್, ಕೆ.ಬಿ.ಪರಮೇಶ್ವರಪ್ಪ ಉಪಸ್ಥಿತರಿರುವವರು ಎಂದರು.