ಮಾ.20ರಿಂದ ಹುಬ್ಬಳಿ-ಬೆಂಗಳೂರು ಮಾರ್ಗಕ್ಕೆ 2 ಹೊಸ ರೈಲುಗಳು

ಮಾ.20ರಿಂದ ಹುಬ್ಬಳಿ-ಬೆಂಗಳೂರು ಮಾರ್ಗಕ್ಕೆ 2 ಹೊಸ ರೈಲುಗಳು

ಬೆಂಗಳೂರು: ಹುಬ್ಬಳ್ಳಿ–ಬೆಂಗಳೂರು ಮಾರ್ಗದಲ್ಲಿ ಎರಡು ಹೊಸ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಇದೇ ಮಾರ್ಚ್ 20 ರಿಂದ ಆರಂಭವಾಗಲಿದೆ ಎಂದು ಧಾರವಾಡ ಸಂಸದರೂ ಆಗಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಕಾಯ್ದಿರಿಸುವ ವಿಶೇಷ ಸೇವೆಯ ಈ ರೈಲುಗಳು ಇದೆ ಮಾರ್ಚ್ 20 ರಿಂದ ತಮ್ಮ ಸಂಚಾರ ಆರಂಭಿಸಲಿವೆ. ರಾತ್ರಿ 11:15ಕ್ಕೆ ಹುಬ್ಬಳ್ಳಿಯಿಂದ ( ರೈಲು ಸಂಖ್ಯೆ : 07339) ಹೊರಡುವ ರೈಲು ಬೆಳಗ್ಗೆ 6:50ಕ್ಕೆ ಬೆಂಗಳೂರು ತಲುಪಲಿದೆ ಹಾಗೂ ಬೆಂಗಳೂರಿನಿಂದ (ರೈಲು ಸಂ : 07340) ರಾತ್ರಿ 11:15ಕ್ಕೆ ಹೊರಡುವ ರೈಲು ಬೆಳಗ್ಗೆ 7:30ಕ್ಕೆ ಹುಬ್ಬಳ್ಳಿ ತಲುಪಲಿದೆ ಎಂದು ಜೋಷಿ ತಮ್ಮ ಫೇಸ್ ಬುಕ್‌ನಲ್ಲಿ ಪ್ರಕಟಿಸಿದ್ದಾರೆ.

ಮತ್ತೊಂದು ರೈಲು ಬೆಳಗ್ಗೆ 7:45ಕ್ಕೆ ಬೆಂಗಳೂರಿನಿಂದ (ರೈಲು ಸಂಖ್ಯೆ : 07353) ಹೊರಟು ಮಧ್ಯಾಹ್ನ 2:30ಕ್ಕೆ ಹುಬ್ಬಳ್ಳಿ ತಲುಪಲಿದೆ ಹಾಗೂ ಹುಬ್ಬಳ್ಳಿಯಿಂದ (ರೈಲು ಸಂ : 07354) 3:15ಕ್ಕೆ ಹೊರಡುವ ರೈಲು ರಾತ್ರಿ 11:10ಕ್ಕೆ ಬೆಂಗಳೂರು ತಲುಪಲಿದೆ’ ಎಂದು ತಿಳಿಸಿದ್ದಾರೆ.

ಈ ಎರಡು ರೈಲುಗಳು ಹಾವೇರಿ, ದಾವಣಗೆರೆ, ಬೀರೂರು, ತುಮಕೂರು ಹಾಗೂ ಯಶವಂತಪುರ ಮಾರ್ಗವಾಗಿ ಸಂಚರಿಸಲಿವೆ ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!