ಬಿ.ಟಿವಿ ಎಂಡಿ ಹಾಗೂ ರಿಪೋರ್ಟರ್ ಗೆ 2 ವರ್ಷ ಜೈಲು ಶಿಕ್ಷೆ
ಉಡುಪಿ: ಬಿಟಿವಿ ಎಂಡಿ ಜಿ.ಎಂ.ಕುಮಾರ್, ವರದಿಗಾರ ಭರತ್ ರಾಜ್, ನಿರೂಪಕ ಶೇಷ ಕೃಷ್ಣಗೆ ಉಡುಪಿ ಜಿಲ್ಲಾ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಶನಿವಾರ 2 ವರ್ಷ ಜೈಲು ಶಿಕ್ಷೆ ಹಾಗೂ ತಲಾ 10,000 ರೂ.ದಂಡ ವಿಧಿಸಿದೆ.
ಕಾಂಗ್ರೆಸ್ ಮುಖಂಡ ಕಿಶನ್ ಹೆಗ್ಡೆ ಕೊಳ್ಗೆಬೈಲ್ ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟಿಸಿದ ಪ್ರಕರಣದಲ್ಲಿ ನ್ಯಾಯಾಲಯವು ಈ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2017ರಲ್ಲಿ ಬಿಟಿವಿಯಲ್ಲಿ ಪ್ರಕಟವಾದ ಮಾನಹಾನಿಯಾಗುವಂತಹ ಸುಳ್ಳು ಸುದ್ದಿಯ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗಿತ್ತು. 6 ವರ್ಷಗಳ ವಿಚಾರಣೆ ಬಳಿಕ ತೀರ್ಪು ಪ್ರಕಟವಾಗಿದೆ.
ಮೂವರು ಆರೋಪಿಗಳಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು ಮೇಲ್ಮನವಿ ಸಲ್ಲಿಕೆಗೆ 1 ತಿಂಗಳ ಗಡುವು ನೀಡಲಾಗಿದೆ.