ಜಿ ಎಂ ಐ ಟಿ ಕಾಲೇಜಿನ 326 ಅಂತಿಮ ವರ್ಷದ ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಕ್ಯಾಂಪಸ್ ಆಯ್ಕೆ
ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ 326 ವಿದ್ಯಾರ್ಥಿಗಳು ವಿವಿಧ ಪ್ರತಿಷ್ಠಿತ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ. ಇದುವರೆಗೂ ನಡೆದ ವಿವಿಧ ಪ್ರತಿಷ್ಠಿತ ಕಂಪನಿಗಳ ಸಂದರ್ಶನ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಕೆಲಸವನ್ನು ಗಿಟ್ಟಿಸಿಕೊಂಡಿದ್ದಾರೆ.
ಇದುವರೆಗೂ ಪ್ರತಿಷ್ಠಿತ ಕಂಪನಿಗಳಾದ ಟಿಸಿಎಸ್, ಎಸ್ ಎಲ್ ಕೆ ಸಾಫ್ಟ್ವೇರ್ ಸರ್ವೀಸಸ್, ವಿಪ್ರೋ, ಹೆಚ್ ಸಿ ಎಲ್, ಐಬಿಎಂ, ಅಲ್ಟ್ರಮ್ ಲೆರೇನ್, ಮಾವೆಂತಿಕ್ ಇನ್ನೋವೇಟಿವ್ ಸಲ್ಯೂಷನ್ಸ್, ಬ್ರೈಟ್ ಚಾಂಪ್ಸ್ ಟೆಕ್, ಕೆರಿಯರ್ ಲ್ಯಾಬ್, ಫೋಕಸ್ ಎಜುಮ್ಯಾಟಿಕ್, ಐಸಿಐಸಿಐ ಬ್ಯಾಂಕ್, ಕ್ಲೌಡ್ ತಿಂಗ್, ಎಕ್ಸ ವೇರ್, ಭಾವನ್ ಸೈಬರ್ ಟೆಕ್, ಕ್ರಾಂಜ್ ಐಟಿ ಸಲ್ಯೂಷನ್ಸ್ ಸಂದರ್ಶನವನ್ನು ನಡೆಸಿದ್ದು, ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಇನ್ನೂ 32 ಕ್ಕೂ ಹೆಚ್ಚು ಕಂಪನಿಗಳು ಸಂದರ್ಶನ ಪ್ರಕ್ರಿಯೆಯನ್ನು ನಡೆಸಲು ಒಪ್ಪಿಗೆಯನ್ನು ಸೂಚಿಸಿದ್ದು, ಅವುಗಳಲ್ಲಿ ಸೋನಾಟಾ ಸಾಫ್ಟ್ವೇರ್, ಇನ್ಫಾಸಿಸ್, ಮೈಂಡ್ ಟ್ರೀ, ಕ್ಯಾಪ್ಜೆಮಿನಿ, ಟಾಟಾ ಎಲೆಕ್ಸಿ, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಕೋಟಕ್ ಮಹಿಂದ್ರ, ಟಿವಿಎಸ್, ಟೊಯೋಟಾ, ಇಫಿ ಡೆವಲಪರ್ಸ್, ಪೂರ್ವಿ ದೆವಲಪರ್ಸ್ ಮುಂತಾದ ಕಂಪನಿಗಳಾಗಿವೆ ಎಂದು ಇದೇ ವೇಳೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ಮಾತನಾಡಿ, ಅತಿ ಹೆಚ್ಚು ಉದ್ಯೋಗವಕಾಶ ನೀಡಿದ ಕಾಲೇಜು ಎಂಬ ಹೆಗ್ಗಳಿಕೆ ಈ ನಮ್ಮ ಮಧ್ಯ ಕರ್ನಾಟಕ ಭಾಗದ ಜಿಎಂಐಟಿ ಕಾಲೇಜಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಇದುವರೆಗೂ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿಯ ಚೇರ್ಮನ್ ಆದ ಶ್ರೀ ಜಿಎಂ ಲಿಂಗರಾಜು, ಆಡಳಿತಾಧಿಕಾರಿ ಶ್ರೀ ವೈ ಯು ಸುಭಾಶ್ಚಂದ್ರ, ವಿವಿಧ ವಿಭಾಗಗಳ ಮುಖ್ಯಸ್ಥರು ಗಳು, ಅಧ್ಯಾಪಕ ವರ್ಗದವರು ಅಭಿನಂದನೆಯನ್ನು ತಿಳಿಸಿದ್ದಾರೆ.
ಶ್ರೀ ತೇಜಸ್ವಿ ಟಿ ಆರ್,
ಮುಖ್ಯಸ್ಥರು, ತರಬೇತಿ ಮತ್ತು ಉದ್ಯೋಗ ವಿಭಾಗ, ಜಿಎಂಐಟಿ ದಾವಣಗೆರೆ.