ಹೆಬ್ಬಾಳು ಟೋಲ್‌ ಬಳಿಯ 39 ಲಕ್ಷ ರೂ. ಮೌಲ್ಯದ 66 ಕೆಜಿ ಬೆಳ್ಳಿ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಕಂಪನಿಗೆ ಸೇರಿದ್ದಾ..?

ಹೆಬ್ಬಾಳು ಟೋಲ್‌ ಬಳಿಯ 39 ಲಕ್ಷ ರೂ. ಮೌಲ್ಯದ 66 ಕೆಜಿ ಬೆಳ್ಳಿ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಕಂಪನಿಗೆ ಸೇರಿದ್ದಾ..?

ದಾವಣಗೆರೆ: ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಅಂದಾಜು 39 ಲಕ್ಷ ರೂ. ಮೌಲ್ಯದ 66 ಕೆ.ಜಿ. ಬೆಳ್ಳಿ ಸಾಮಗ್ರಿಗಳನ್ನು ತಾಲ್ಲೂಕಿನ ಹೊರವಲಯದ ಹೆಬ್ಬಾಳು ಟೋಲ್ ಬಳಿಯ ಚೆಕ್‌ ಪೋಸ್ಟ್‌ನಲ್ಲಿ ಗುರುವಾರ ತಡರಾತ್ರಿ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬಿಎಂಡಬ್ಲ್ಯೂ ಕಾರ್‌ನಲ್ಲಿ ಐದು ಬಾಕ್ಸ್‌ಗಳಲ್ಲಿ ಸಾಗಿಸುತ್ತಿದ್ದ ಬೆಳ್ಳಿ ಬಟ್ಟಲು, ಚಮಚ, ನೀರಿನ ಜಗ್ ಹಾಗೂ ತಟ್ಟೆಗಳನ್ನು ಸಾಗಿಸಲಾಗುತ್ತಿತ್ತು. ಈ ಬೆಳ್ಳಿ ಸಾಮಗ್ರಿಗಳು ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರ ಕುಟುಂಬಕ್ಕೆ ಸೇರಿವೆ ಎಂದು ಕಾರಿನಲ್ಲಿದ್ದ ಹರಿಸಿಂಗ್ ಹೇಳಿದ್ದಾರೆ.
ಕಾರ್‌ನಲ್ಲಿದ್ದ ಹರಿಸಿಂಗ್ ಹಾಗೂ ಚಾಲಕ ಸುಲ್ತಾನ್ ಖಾನ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ಳಿ ಸಾಮಾನುಗಳನ್ನು ಚೆನ್ನೈನಿಂದ ಮುಂಬೈಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಆದರೆ ಯಾವುದೇ ದಾಖಲೆಗಳು ಇರದ ಕಾರಣ ಸಿಬ್ಬಂದಿಗಳು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!