ದಾವಣಗೆರೆ ಬಳಿ ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ 4 ಜನ ದಾರುಣ ಸಾವು
ದಾವಣಗೆರೆ: ಬಸ್ಸು, ಕಾರು ಮಧ್ಯೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ದಾರುಣವಾಗಿ ಸಾವು ಕಂಡಿರುವ ಘಟನೆ ನ್ಯಾಮತಿ ತಾಲ್ಲೂಕಿನ ಸವಳಂಗ ಬಳಿ ನಡೆದಿದೆ.
ಭದ್ರಾವತಿ ತಾಲೂಕಿನ ದ್ರಾಕ್ಷಾಣಿ, ಸುಮ, ಶಾರದಮ್ಮ ಸ್ಥಳದಲ್ಲೆ ಸಾವು ಕಂಡಿದ್ದು, ಕಾರು ಚಾಲಕ ಸುನೀಲ್ ಶಿವಮೊಗ್ಗದ ಮೇಗನ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಿಸದೆ ಸಾವು ಕಂಡಿದ್ದಾರೆ.
ಬಸ್ ಗೆ ಹಿಂಬದಿಯಿಂದ ಲಾರಿ ಗುದ್ದಿದ ಪರಿಣಾಮ ಈ ಘಟನೆ ನಡೆದಿದೆ.