ಕೆನಡಾದಲ್ಲಿ ಸಂಭವಿಸಿದ ಆಟೋ ಅಪಘಾತದಲ್ಲಿ ಭಾರತೀಯ 5 ವಿದ್ಯಾರ್ಥಿಗಳು ಸಾವು
ಬೆಂಗಳೂರು : ಕೆನಡಾದಲ್ಲಿ ಸಂಭವಿಸಿದ ಆಟೋ ಅಪಘಾತದಲ್ಲಿ ಭಾರತೀಯ ಮೂಲದ 5 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಕೆನಡಾದ ಭಾರತದ ಕಮಿಷನರ್ ಅಜಯ್ ಬಿಸಾರಿಯಾ ತಿಳಿಸಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕೆನಡಾದ ಟೊರೊಂಟೊ ಬಳಿ ಮಾರ್ಚ್ 13ರಂದು ಆಟೋ ಅಪಘಾತ ಸಂಭವಿಸಿದ್ದು, ಇನ್ನಿಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ತಂಡವು ಸಹಾಯಕ್ಕಾಗಿ ಸಂತ್ರಸ್ತರ ಸ್ನೇಹಿತರೊಂದಿಗೆ ಸಂಪರ್ಕದಲ್ಲಿದೆ. ಟ್ವಿಟರ್‌ನಲ್ಲಿ ಅಜಯ್ ಬಿಸಾರಿಯಾ ಅವರು ಸಂತ್ರಸ್ತರ ಕುಟುಂಬಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.