ದಾವಣಗೆರೆ :ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಪಟು ಹರಿಹರದ ಸೃಷ್ಟಿ ಕೆ ವೈ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಡೆದ ರಾಷ್ಟ್ರೀಯ ಯೋಗ ಸ್ಪರ್ಧೆ ಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ವಿಜೇತ ಳಾಗಿದ್ದಾಳೆ.
ಕಳೆದ 19-21 ರವರಿಗೆ ಜಮ್ಮುವಿನ ತಾವೇ ನಲ್ಲಿ ಕೇಂದ್ರ ಸರ್ಕಾರದ ಯುವ ಮತ್ತು ಕ್ರೀಡಾ ಸಬಲೀಕರಣ ಇಲಾಖೆ ಸಹಯೋಗದಲ್ಲಿ ನಡೆದ ಆರನೇ ರಾಷ್ಟ್ರೀಯ ಯೋಗ ಸ್ಪರ್ಧೆ ಯಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ದ ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಪಟು ಸೃಷ್ಟಿ 10-12 ವರ್ಷ ಗಳ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ವಿಜೇತ ಳಾಗಿದ್ದು ರಾಜ್ಯ ಹಾಗೂ ಜಿಲ್ಲೆಗೇ ಮತ್ತೋಮ್ಮೆ ಕೀರ್ತಿ ತಂದಿರುವುದು ಸಂತಸ ತಂದಿದೆ ಎಂದು ಹರಿಹರ ಹಾಗೂ ದಾವಣಗೆರೆ ಯೋಗ ಸಂಸ್ಥೆ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
