ಸೊಂಟಕ್ಕೆ 7.5 ಲಕ್ಷ ಹಣ ಕಟ್ಟಿಕೊಂಡು ಹಣ ಸಾಗಾಟ.! ಐನಾತಿ ಐಡಿಯಾ ಉಪಯೋಗಿಸಿ ಸಿಕ್ಕಿಬಿದ್ದ ಆಸಾಮಿಗಳು
ದಾವಣಗೆರೆ: ಚುನಾವಣಾ ನಿಮಿತ್ತ ಜಿಲ್ಲೆಯಾದ್ಯಂತ ಪೊಲೀಸ್ ಚೆಕ್‌ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಐನಾತಿ ಐಡಿಯಾ ಉಪಯೋಗಿಸಿ ಸಿಕ್ಕಿಬಿದ್ದಿದ್ದಾರೆ.
ಹೌದು ಸೊಂಟಕ್ಕೆ 7.5 ಲಕ್ಷ ರೂ. ಹಣವನ್ನು ಸೊಂಟಕ್ಕೆ ಕಟ್ಟಿಕೊಂಡು ಬೈಕ್‌ನಲ್ಲಿ ಹೊರಟಿದ್ದ ವ್ಯಕ್ತಿಗಳು, ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆದರೆ, ಅವರ ಚಾಲಾಕಿ ಕಾರ್ಯ ನೋಡಿದರೆ ನಿವೂ ಕೂಡ ಆಶ್ಚರ್ಯವಾಗುವುದು ಗ್ಯಾರಂಟಿ.
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ 50 ಸಾವಿರ ರೂ.ಗಿಂತ ಹೆಚ್ಚು ಮೊತ್ತದ ನಗದು ಹಣ ಸಾಗಣೆ ಮಾಡಲು ಕಡ್ಡಾಯವಾಗಿ ದಾಖಲೆಗಳನ್ನು ಕೊಂಡೊಯ್ಯಬೇಕು. ಆದರೆ, ದಾವಣಗೆರೆಯ ಓರ್ವ ವ್ಯಕ್ತಿ ಚೆಕ್‌ಪೋಸ್ಟ್‌ನಲ್ಲಿದ್ದ ಪೊಲೀಸರ ಕಣ್ತಪ್ಪಿಸಿ ದಾಖಲೆಗಳಿಲ್ಲದ 7.5 ಲಕ್ಷ ರೂ.ಗಳನ್ನು ಕೊಂಡೊಯ್ಯಲು ಹೊಸದೊಂದು ಪ್ರಯತ್ನ ಮಾಡಿದ್ದಾನೆ.
ನೋಟುಗಳ ಕಂತೆಗಳನ್ನು ಹಗ್ಗದಲ್ಲಿ ಕಟ್ಟಿ ಅದನ್ನು ಸೊಂಟಕ್ಕೆ ಕಟ್ಟಿಕೊಂಡು ಬೈಕ್‌ನಲ್ಲಿ ಹೋರಟಿದ್ದಾನೆ, ಆತನ ಚಲನವಲನ ಗಮನಿಸಿದ ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಹಣ ಸಾಗಿಸುತ್ತಿರುವುದು ಪತ್ತೆಯಾಗಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ನ್ಯಾಮತಿ ಬಳಿಯ ಜೀನಹಳ್ಳಿ ಚೆಕ್ ಪೊಸ್ಟ್‌ನಲ್ಲಿ ಈ ಘಟನೆ ನಡೆದಿದ್ದು, ಸರಿಯಾದ ದಾಖಲೆ ಇಲ್ಲದೆ ಬೈಕ್‌ನಲ್ಲಿ ಸಾಗಿಸುತ್ತಿದ್ದ 7.5 ಲಕ್ಷ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹಣ ಸಾಗಿಸುತ್ತಿದ್ದ ವ್ಯಕ್ತಿ ಸೊಂಟದ ಸುತ್ತಲೂ ಹಣ ಇಟ್ಟುಕೊಂಡು ಹೋಗುತ್ತಿದ್ದನು. ಇನ್ನು ಆತನ ಹಿಂದೆ ಮತ್ತಿಬ್ಬರು ಕುಳಿತುಕೊಂಡಿದ್ದರು. ಬೈಕ್ ಮೇಲೆ ತೆರಳುತ್ತಿದ್ದ ಇವರ ನಡವಳಿಕೆಯನ್ನು ನೋಡಿದ ಪೊಲೀಸರಿಗೆ ಅನುಮಾನ ಬಂದು ಅವರನ್ನ ತಪಾಸಣೆ ಮಾಡಿದ್ದಾರೆ. ಈ ವೇಳೆ ಒಬ್ಬ ವ್ಯಕ್ತಿಯ ಸೊಂಟದಲ್ಲಿ ಹಗ್ಗದಲ್ಲಿ ಹಣ ಕಟ್ಟಿಕೊಂಡಿರುವುದು ಬೇಳಕಿಗೆ ಬಂದಿದೆ.
ಬೈಕ್‌ನಲ್ಲಿ ಹಣವನ್ನು ತಮ್ಮ ಸೊಂಟದಲ್ಲಿ ಕಟ್ಟಿಕೊಂಡು ಹೋಗುತ್ತಿದ್ದ ವ್ಯಕ್ತಿಗಳನ್ನು ಸೈಫುಲ್ಲಾ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ. ಸೈಫುಲ್ಲಾ, ಮತ್ತು ಕುಮಾರ್ ಇವರಿಬ್ಬರೂ ಶಿಕಾರಿಪುರ ಮೂಲದವರು ಎನ್ನಲಾಗಿದೆ. ವಿಚಾರಣೆ ವೇಳೆ ಸರಿಯಾದ ಮಾಹಿತಿಯನ್ನು ಇವರುಗಳು ನೀಡಿಲ್ಲ.
ಸದರಿ ಘಟನೆಯ ಬಗ್ಗೆ ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರು ತಾವು ಎಲ್ಲಿಂದ ಬಂದಿದ್ದಿರಿ ಎಂದರೆ ಒಮ್ಮೊಮ್ಮೆ ಒಂದೊಂದು ಉತ್ತರ ನೀಡಿ ನಾವು ದಾವಣಗೆರೆ ಹಾಗೂ ಹೊನ್ನಾಳಿಯಿಂದ ಬಂದಿದ್ದೇವೆ ಎಂಬ ಗೊಂದಲ ಮಯದ ಹೇಳಿಕೆಗಳನ್ನು ನೀಡಿದ್ದಾರೆ. ಅಧಿಕಾರಿಗಳು ದಾಖಲೆ ನೀಡುವಂತೆ ಕೇಳಿದರೂ ದಾಖಲೆ ತೋರಿಸದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳಿಗೆ ಸುಲಭವಾಹಗಿ ಸಿಕ್ಕಿಬಿದ್ದಿದ್ದಾರೆ.