ಖಾಸಗಿ ಬಸ್ ದುರಂತದ ಬಳಿಕ ರಾಜ್ಯ ಸರ್ಕಾರದಿಂದ 7 ಕೆಎಸ್‌ಆರ್‌ಟಿಸಿ ಬಸ್’ಗಳು ಸಂಚಾರ ಪ್ರಾರಂಭ
ತುಮಕೂರು : ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಬಳಿಯಲ್ಲಿ ಖಾಸಗಿ ಬಸ್ ಅಪಘಾತಗೊಂಡು ಭೀಕರ ದುರ್ಘಟನೆ ನಡೆದ ನಂತರ ರಾಜ್ಯ ಸರ್ಕಾರ 7 ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವನ್ನು ಈ ಮಾರ್ಗದಲ್ಲಿ ಪ್ರಾರಂಭಿಸಿದೆ. ಪಳವಳ್ಳಿ ಕಟ್ಟೆ ಬಳಿಯಲ್ಲಿನ ಖಾಸಗಿ ಬಸ್ ಅಪಘಾತದ ಬಳಿಕ, 24 ಗಂಟೆಯೊಳಗೆ ಕೆಎಸ್‌ಆರ್‌ಟಿಸಿ ಚುರುಕು ಗೊಂಡಿದ್ದು, ವೈ.ಎನ್ ಹೊಸಕೋಟೆ ಟು ಪಾವಗಡ ಮಾರ್ಗಕ್ಕೆ ಭಾನುವಾರದಿಂದ ಒಂದಲ್ಲ ಎರಡಲ್ಲ 7 ಬಸ್ ಗಳನ್ನು ಸಂಚಾರಕ್ಕಾಗಿ ನಿಯೋಜಿಸಲಾಗಿದೆ.
ಈ ಘಟನೆಯ ಬಳಿಕ ತತ್‌ಕ್ಷಣವೇ ಸ್ಪಂದಿಸಿರುವ ಸಾರಿಗೆ ಸಚಿವ ಬಿ. ಶ್ರೀರಾಮುಲು, ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆಗೆ ಕ್ರಮ ಕೈಗೊಂಡು, ಮತ್ತೆ ಮುಂದೆ ಯಾವುದೇ ರೀತಿಯಾ ದಂತ, ಖಾಸಗಿ ಬಸ್ ಅಪಘಾತದಂತ ದುರಂತ ಸಂಭವಿಸದಂತೆ ಎಚ್ಚರಿಕೆ ವಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಸ್ ಅಪಘಾತಕ್ಕೂ ಮುನ್ನಾದ ದೃಶ್ಯಾವಳಿ ಬುಡರೆಡ್ಡಿ ಹಳ್ಳಿ ಬಳಿಯಲ್ಲಿನ ಟೋಲ್ ಬಳಿಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಆ ದೃಶ್ಯದಲ್ಲಿ ಎದೆ ನಡುಗಿಸುವಂತಿವೆ. ಸಂತೆಗೆ ಕುರಿಗಳನ್ನು ತುಂಬಿಕೊಂಡು ಹೋಗುವಂತೆ, ಯಮದೂತ ಬಸ್, ಜನರನ್ನು ತುಂಬಿಸಿಕೊಂಡಿರುವುದು ದೃಶ್ಯಾವಳಿಯಲ್ಲಿ ಕಂಡು ಬಂದಿದೆ.