ಪಾಕಿಸ್ತಾನದಲ್ಲಿ ಕೆಜಿ ಕೋಳಿ ಮಾಂಸಕ್ಕೆ 720 ರೂ.

ಪಾಕಿಸ್ತಾನ ಕೋಳಿ
ಕರಾಚಿ: ಪಾಕಿಸ್ತಾನದಲ್ಲಿ ಕೋಳಿ ಮಾಂಸದ ಬೆಳೆ ಎಷ್ಟು ಗೊತ್ತೇ? ಕೇವಲ 720 ರೂಪಾಯಿ !ಪ್ರಸ್ತುತ ಕರಾಚಿಯಲ್ಲಿ ಕೋಳಿ ಕೆಜಿಗೆ 490 ರೂ. ಇದ್ದರೆ, ಕೋಳಿ ಮಾಂಸದ ಬೆಲೆ ಕೆಜಿಗೆ 720ಕ್ಕೆ ತಲುಪಿದೆ.
ಹೌದು, ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಕೋಳಿ ಮತ್ತು ಕೋಳಿ ಮಾಂಸದ ಬೆಲೆಗಳು ತೀವ್ರ ಏರಿಕೆ ಕಂಡಿದ್ದು, ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ ಬೆಲೆ ತಲುಪಿದೆ.
ಕರಾಚಿಯಲ್ಲಿ ಒಂದು ಕೆ.ಜಿ ಕೋಳಿ ಮಾಂಸವು 720ಕ್ಕೆ ಮಾರಾಟವಾಗುತ್ತಿದೆ. ರಾವಲ್ಪಿಂಡಿ, ಇಸ್ಲಾಮಾಬಾದ್ ಸೇರಿದಂತೆ ಕೆಲವು ನಗರಗಳಲ್ಲಿ ಕೋಳಿ ಮಾಂಸದ ಬೆಲೆ 700-705 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಲಾಹೋರ್‌ನಲ್ಲಿ ಕೆಜಿಗೆ 550-600 ರೂ.ಗೆ ಮಾರಾಟವಾಗುತ್ತಿದೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.
ದೇಶದಲ್ಲಿ ಆಹಾರದ ಕೊರತೆ ಎದುರಾಗಿದ್ದು, ಇದರಿಂದಾಗಿ ಕುಕ್ಕುಟೋದ್ಯಮವನ್ನು ಹಲವಾರು ವ್ಯಾಪಾರಸ್ಥರು ನಿಲ್ಲಿಸಿದ್ದಾರೆ. ಈ ಕಾರಣದಿಂದಾಗಿ ಕೋಳಿ ಮಾಂಸದ ಬೆಲೆ ಏರಿಕೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇಲ್ಲಿನ ಜನರು ಪ್ರೋಟೀನ್‌ನ ಮೂಲವಾಗಿ ಕೋಳಿಯನ್ನು ಅವಲಂಬಿಸಿದ್ದಾರೆ. ಬೆಲೆ ಏರಿಕೆ ಬಗ್ಗೆ ಗ್ರಾಹಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಅಂದ ಹಗೆ ಕುಕ್ಕುಟೋದ್ಯಮವು ಪಾಕಿಸ್ತಾನ ಆರ್ಥಿಕತೆ ಪ್ರಮುಖ ಭಾಗವಾಗಿದೆ.