ಉಚ್ಚೆಂಗೆಮ್ಮದೇವಿ ಹುಂಡಿಯಲ್ಲಿ 73 ಲಕ್ಷ ರೂಪಾಯಿ ಸಂಗ್ರಹ.
ಉಚ್ಚಂಗಿದುರ್ಗ : ಇಲ್ಲಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಉಚ್ಚೆಂಗೆಮ್ಮದೇವಿ ದೇವಸ್ಥಾನದಲ್ಲಿ ಬುಧವಾರ ಕಾಣಿಕೆ ಹುಂಡಿ ಎಣಿಕೆ ಮಾಡಲಾಗಿದ್ದು ಹುಂಡಿಯಲ್ಲಿ 73,35,889 ರೂ ಸಂಗ್ರಹವಾಗಿದೆ ಎಂದು ಶ್ರೀ ಉತ್ಸವಾoಭ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಚ್ ಮಲ್ಲಪ್ಪ ತಿಳಿಸಿದ್ದಾರೆ.
ಹುಂಡಿ ಎಣಿಕೆ ಬೆಳಿಗ್ಗೆ 10.30 ರಿಂದ ಗಂಟೆಯಿಂದ ರಾತ್ರಿ 11 ಘಂಟೆ ರವರೆಗೆ ನಡೆಯಿತು
ಉಚ್ಚೆಂಗೆಮ್ಮ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಉಚ್ಚoಗಿದುರ್ಗದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳಿಗೆ ದೇವಸ್ಥಾನದ ಖಾತೆಗೆ ಜಮಾ ಮಾಡಲು ಹಸ್ತಾಂತರ ಮಾಡಲಾಯಿತು.
ಈ ಹಿಂದೆ ನ.12 ರಂದು ಎಣಿಕೆ ನಡೆದಿತ್ತು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಗೌಡ, ಸದಸ್ಯರಾದ Hಜಯ್ಯಪ್ಪ, ಎಸ್ ಶಿವಪ್ಪ,ಕಟ್ಟಿಗೆ ಪರಶುರಾಮಪ್ಪ, ಗ್ರಾಮಸ್ಥರಾದ ನಾಗೇಂದ್ರಪ್ಪ,ಅರ್ಚಕರು,
ಬ್ಯಾಂಕ್ ಮಾನೇಜರ್ ಉಲ್ಲಾಸ್ ರೆಡ್ಡಿ ಅರಸೀಕೆರೆ ಪೊಲೀಸ್ ಸಿಬ್ಬಂದಿಯಾದ ನಟರಾಜ್,ಬಳ್ಳಾರಿ ಧಾರ್ಮಿಕ ದತ್ತಿ ಇಲಾಖೆಯ ಪರಿವೀಕ್ಷಕ ಚೇತನ್, ದೇವಸ್ಥಾನದ ಸಿಬ್ಬಂದಿಗಳು ಉಪಸ್ಥಿತರಿದ್ದರು.