ಬಸ್ ನಿಲ್ದಾಣ ಲೋರ್ಕಪಣೆ ಸೇರಿದಂತೆ 81.21 ಕೋಟಿಗಳ ವಿವಿಧ ಕಟ್ಟಡಗಳ ಲೋಕಾರ್ಪಣೆ

ಬಸ್ ನಿಲ್ದಾಣ ಲೋರ್ಕಪಣೆ ಸೇರಿದಂತೆ 81.21 ಕೋಟಿಗಳ ವಿವಿಧ ಕಟ್ಟಡಗಳ ಲೋಕಾರ್ಪಣೆ

ದಾವಣಗೆರೆ: ದಿನನಿತ್ಯ ನಗರದ ಸ್ವಚ್ಚತೆಗಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಿರುವುದು ಅತ್ಯಂತ ಸಂತಸ ತಂದಿದೆ ಶೀಘ್ರವೇ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರರಿಸಲಾಗುವುದು ಎಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ ಹೇಳಿದರು.

ನಗರದ ಹೊರವಲಯದ ದೊಡ್ಡಬೂದಿಹಾಳ್ ಗ್ರಾಮದಲ್ಲಿ ಪೌರಕಾರ್ಮಿಕರಿಗಾಗಿ ನಿರ್ಮಿಸಲಾದ ಮನೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಪೌರಕಾರ್ಮಿಕರಿಗಾಗಿ ಅತ್ಯಂತ ಸುಸಜ್ಜಿತವಾಗಿ ಮನೆ ನಿರ್ಮಿಸಲಾಗಿದೆ ಅದೇ ಇಲಾಖೆಯ ಸಚಿವನಾಗಿ ನನಗೆ ನೆಮ್ಮದಿ ತಂದಿದೆ ರೂ.51 ಕೋಟಿ ವೆಚ್ಚದಲ್ಲಿ ಜಿ+1 ಮಾದರಿಯ 381 ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಪ್ರತಿ ಮನೆಗೆ 13.40 ಲಕ್ಷ ವೆಚ್ಚವಾಗಿದೆ ಪ್ರತಿ ಬ್ಲಾಕ್ ನಲ್ಲಿ ನೆಲ ಮತ್ತು ಮಹಡಿ ಸೇರಿ 04 ಮನೆಗಳಿದ್ದು ಪ್ರತಿ ಮನೆಯು 54 ಚ.ಮೀ ವಿಸ್ತೀರ್ಣ ಹೊಂದಿದೆ. ಕೇಂದ್ರ ಸರ್ಕಾರ 1.75 ಲಕ್ಷ ರಾಜ್ಯ ಸರ್ಕಾರ 8.13 ಲಕ್ಷ ಮಹಾನಗರಪಾಲಿಕೆ 2.81 ಲಕ್ಷ ಹಾಗೂ ಫಲಾನುಭವಿಗಳ ವಂತಿಕೆ 62.500 ರೂ ಗಳನ್ನು ಕ್ರೂಡೀಕರಿಸಿ ಮನೆಗಳನ್ನು ನಿರ್ಮಿಸಲಾಗಿದೆ ಎಂದರು.

ಮಿನಿ ವಿಧಾನ ಸೌಧ ಉದ್ಘಾಟನೆ: ರೂ.582.57 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಮಿನಿ ವಿಧಾನಸೌಧ ಹಾಗೂ ಅಲ್ಪ ಸಂಖ್ಯಾತರ ರೂ.393 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನಗರದ ಕುಂದುವಾಡ ಗ್ರಾಮದ ಬಳಿ ಅಲ್ಪ ಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಮತ್ತು 50 ಸಂಖ್ಯಾ ಬಲದ ಉದ್ಯೋಸ್ಥ ಮಹಿಳಾ ವಿದ್ಯಾರ್ಥಿನಿಲಯ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿದರು.

ದೂರ ಹಳ್ಳಿಗಳಿಂದ ಮತ್ತು ತಾಲ್ಲೂಕು ಕೇಂದ್ರಗಳಿಂದ ನಗರದಕ್ಕೆ ವಿದ್ಯಾಭ್ಯಾಸ ಮತ್ತು ಕೆಲಸ ಅರಸಿ ಬರುವ 50 ವಿದ್ಯಾರ್ಥಿನಿಯರಿಗೆ ಮತ್ತು 50 ಉದ್ಯೂಗಸ್ಥ ,ಮಹಿಳೆಯರಿಗೆ ಉಚಿತ ಊಟ ವಸತಿ ಹಾಗೂ ಇನ್ನಿತರೆ ಮೂಲಭೂತಸೌಲಭ್ಯಗಳನ್ನು ಈ ವಿದ್ಯಾರ್ಥಿನಿಲಯಗಳಲ್ಲಿ ಉದ್ದೇಶ ಹೊಂದಲಾಗಿದೆ. .

ಬಸ್ ನಿಲ್ದಾಣ ಲೋರ್ಕಪಣೆ: ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಯೋಜನೆಯಡಿ ದಾವಣಗೆರೆ ನಗರದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಮಹಾನಗರಪಾಲಿಕೆ ಮಾಲೀಕತ್ವದಲ್ಲಿಯ ಹಳೇ ಬಸ್ ನಿಲ್ದಾಣದ ಸ್ಥಳದಲ್ಲಿ ರೂ. 26.42 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನವಿಕೃತ ಹೊಸ ಬಸ್ ನಿಲ್ದಾಣವನ್ನು ಇಂದು ಲೋಕಾರ್ಪಣೆಗೊಳಿಸಿದರು.

ಎರಡು ಅಂತಸ್ತು ಹೊಂದಿರುವ ಕಟ್ಟಡದ ತಳಮಹಡಿಯಲ್ಲಿ  200 ದ್ವಿಚಕ್ರ ವಾಹನಗಳು ಹಾಗೂ 21 ಲಘು ವಾಹನಗಳ ನಿಲುಗಡೆಗೆ ಅವಕಾಶ. 35 ಸಾವಿರ ಲೀಟರ್ ಸಾಮಥ್ರ್ಯದ 02 ನೀರಿನ ಸಂಗ್ರಹಗಳು ಮತ್ತು ಬಸ್ ನಿಲ್ದಾಣವನ್ನು ನಿರ್ವಹಿಸುವ ಗುತ್ತಿಗೆದಾರರಿಗೆ 01 ಕೊಠಡಿ ವ್ಯವಸ್ಥೆ ಮಾಡಲಾಗಿದೆ.   ಏಕಕಾಲಕ್ಕೆ 14 ಬಸ್ ಗಳ ನಿಲುಗಡೆಗಾಗಿ ಬಸ್ ಬೇ ಪ್ರಯಾಣಿಕರಿಗೆ ಸುಸಜ್ಜಿತ ಆಸನ ವ್ಯವಸ್ಥೆ, ಪ್ರಯಾಣಿಕರಿಗೆ ಕ್ಯಾಂಟಿನ್, ಮಕ್ಕಳಿಗೆ ಹಾಲುನಿಸುವ ಬೇಬಿ ಕೇರ್ ಕೊಠಡಿ,ಮಹಿಳೆಯರ ಮತ್ತು ಪುರಷರ ಪ್ರತ್ಯೇಕ ಶೌಚಾಲಯ,ಹಾಗೂ ಸ್ನಾನಗೃಹಗಳು ಮತ್ತು 03 ವಾಣಿಜ್ಯ ಮಳಿಗೆಗಳು, ಕಟ್ಟಡದಲ್ಲಿ 03 ಕಡೆ ಸ್ಟೇರ್ ಕೇಸ್, 03 ಲಿಪ್ಟ್ ಗಳು ಹಾಗೂ ಹತ್ತಿಳಿಯಲು 04 ಎಕ್ಸ್ಯೂಲೇಟರ್ ಗಳನ್ನು ಅಳವಡಿಸಲಾಗಿದೆ.

ಎಡಭಾಗ ಹಾಗೂ ಬಲಭಾಗದಲ್ಲಿ ಆಟೋ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ಸಿ.ಸಿ.ಟಿ.ವಿ ಹಾಗೂ ಅಗ್ನಿ ಶಾಮಕ ವ್ಯವಸ್ಥೆ, ಮ್ಯುರಲ್ಬ ಆರ್ಟ್ ಮತ್ತು ನಮ್ಮ ದಾವಣಗೆರೆ ಸೆಲ್ಪಿ ಪಾಯಿಂಟ್ ವ್ಯವಸ್ಥೆ ಮಾಡಲಾಗಿದೆ. ಮಧ್ಯದ ಮಹಡಿ: 30 ವಾಣಿಜ್ಯ ಮಳಿಗೆಗಳು, ಮಹಿಳೆ ಮತ್ತು ಪುರುಷರ ಪ್ರತ್ಯೇಕ ಶೌಚಾಲಯ, ಪ್ಯಾನಿಕರ ಅನುಕೂಲಕ್ಕೆ ಲಗೇಜ್ ಕೊಠಡಿ-02 ನಿರ್ಮಿಸಲಾಗಿದೆ. 1ನೇ ಮಹಡಿಯಲ್ಲಿ: 03 ಬೃಹತ್ ವಾಣಿಜ್ಯ ಮಳಿಗೆಗಳು,ಹಾಗೂ 49 ಸಣ್ಣ ವಾಣಿಜ್ಯ ಮಳಿಗೆಗಳು, ಮಹಿಳೆಯರ ಮತ್ತು ಪುರುಷರ ಪ್ರತ್ಯೇಕ ಶೌಚಾಲಯ. ತಾರಸಿ ಮಹಡಿ: 02 ಕಾಂಕ್ರಿಟ್ ನೀರಿನ ಸಂಗ್ರಹಗಾರಗಳು. ವಿದ್ಯುತ್ ಸ್ಥಾವರ 01 ಮತ್ತು ಬೆಸ್ಕಾಂ ನಿಂದ ವಿದ್ಯುತ್ ಅಡಚಾಣೆಯಾದಲ್ಲಿ ಬದಲಿ ವಿದ್ಯುತ್ ಗಾಗಿ 62 ಕೆ.ವಿ ಡಿಸೇಲ್ ಜನರೇಟರ್ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಮಹಡಿಗಳಲ್ಲೂ ಮತ್ತು ಬಸ್ ಬೇ ನಲ್ಲಿ ಅವಶ್ಯಕತೆನುಗುನವಾಗಿ ವಿದ್ಯುತ್ ದೀಪಗಳ ವ್ಯವಸ್ಥೆ ಸೇರಿದಂತೆ ಸೌಲಭ್ಯಗಳು ನೂತನ ಬಸ್ ನಿಲ್ದಾಣದಲ್ಲಿ ಗಮನ ಸೆಳೆಯುತ್ತವೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಸಚಿವರಾದ ಆಚಾರ್ ಹಾಲಪ್ಪ, ಸಂಸದರಾದ ಡಾ.ಜಿ.ಎಂ.ಸಿದ್ದೇಶ್ವರ, ಶಾಸಕರಾದ ರವೀಂದ್ರನಾಥ್, ಮಹಾಪೌರರಾದ ವಿನಾಯಕ್.ಬಿ.ಹೆಚ್, ಮಾಜಿ ಮಹಾಪೌರರಾದ ಎಸ್.ಟಿ.ವೀರೇಶ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಎ ಚೆನ್ನಪ್ಪ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಹಾಗೂ ವಿವಿಧ ಜನಪ್ರತಿನಿಧಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!