ಕಲಾಕಲ್ಪ ಕಲಾಶಾಲೆಯ 8ನೇ ವಾರ್ಷಿಕೋತ್ಸವ

ದಾವಣಗೆರೆ: ಓಂಕಾರ ಸಂಸ್ಕöತಿ ವಿದ್ಯಾ ಪ್ರತಿಷ್ಠಾನದ ಕಲಾಕಲ್ಪ ಕಲಾಶಾಲೆಯ 8 ನೇ ವಾರ್ಷಿಕೋತ್ಸವವು ಶ್ರೀ ಶಿವಾಚಾರ್ಯ ಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ನಡೆಯಿತು.
ಕಲಾಕಲ್ಪ ಪ್ರತಿಭೋತ್ಸವ-2022ರ ಅಂಗವಾಗಿ ಚಿತ್ರಕಲೆ, ಅಂದವಾದ ಬರವಣಿಗೆ, ಸಂಗೀತ ಹಾಗೂ ನೃತ್ಯ ಸ್ಪರ್ಧೆಯನ್ನು ಸ್ವರೂಪ ಬದ್ರಿನಾಥ್, ದಿವ್ಯ ಜಂಬಿಗಿ ಮತ್ತು ಸುಮನಾ ತಲಗಾವಿ ಇವರ ಸಹಕಾರದೊಂದಿಗೆ ಏರ್ಪಡಿಸಿ ಬಹುಮಾನವನ್ನು ವಿತರಿಸಲಾಯಿತು. ರಂಗಕರ್ಮಿ ಸಿದ್ದರಾಜು ಅವರಿಗೆ ಕಲಾಕಲ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಕಲಾಕಲ್ಪ ಕಲಾಶಾಲೆಯ ಭರತನಾಟ್ಯ ವಿಭಾಗದ ವಿದ್ಯಾರ್ಥಿನಿಯರಿಂದ ರಂಗ ಕಲ್ಪ ರಂಗಗೀತೆಗಳ ನೃತ್ಯ ಪ್ರದರ್ಶನವನ್ನು ಕುಮಾರಿ ವಿದುಷಿ ಅಶ್ವಿಕ ಐನಹಳ್ಳಿ ಇವರ ನೃತ್ಯ ಸಂಯೋಜನೆ ಮತ್ತು ವಿದುಷಿ ಐನಹಳ್ಳಿ ಜ್ಞಾನಿಕ ರವಿಕುಮಾರ್ ಇವರ ಸಾರಥ್ಯದಲ್ಲಿ ಪ್ರದರ್ಶಿಸಲಾಯಿತು. ಕಲಾಶಾಲೆಯ ಪಾಶ್ಚಿಮಾತ್ಯ ನೃತ್ಯ ವಿಭಾಗದ ವಿದ್ಯಾರ್ಥಿಗಳು ಗುರುಗಳಾದ ಮಾಸ್ಟರ್ ವಿವೇಕ್ ಎಂ.ಪಿ ಅವರ ಸಾರಥ್ಯದಲ್ಲಿ ನೃತ್ಯವನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಐನಹಳ್ಳಿ ವಿಶ್ವ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು, ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ. ಶೆಟ್ಟಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಸದಸ್ಯ ರವೀಂದ್ರ ಅರಳುಗುಪ್ಪಿ, ಐನಹಳ್ಳಿ ಶುಭ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!