ಪಿ ಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 999.38 ಕೋಟಿ ಹಣ ಇಂದು ಬಿಡುಗಡೆ

999.38 crore of PM Kisan Samman Nidhi Yojana released today

ಪಿ ಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 999.38 ಕೋಟಿ ಹಣ ಇಂದು ಬಿಡುಗಡೆ

ದಾವಣಗೆರೆ: ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಂದು ರಾಜ್ಯದ 4996924 ರೈತ ಕುಟುಂಬಗಳಿಗೆ ರೂ. 999.38 ಕೋಟಿ ರೂ.ಗಳನ್ನು ಆರ್ಥಿಕ ನೆರವಾಗಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತನ್ನು ನೇರವಾಗಿ ಡಿಬಿಟಿ ಮುಖಾಂತರ ಅವರುಗಳ ಖಾತೆಗಳಿಗೆ ಬಿಡುಗಡೆ ಮಾಡುವರು.

ಕರ್ನಾಟಕ ರಾಜ್ಯದಲ್ಲಿ ಭಾರತ ಸರ್ಕಾರದ ಪಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಕಳೆದ
ದಿನಾಂಕ 01.12.2018 ರಿಂದ ಅನ್ವಯ ವಾಗುವಂತೆ ಫೆಬ್ರವರಿ 2019 ರಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ವಾರ್ಷಿಕ ರೂ.6000/-ಗಳ ಆರ್ಥಿಕ ನೆರವನ್ನು
ರೂ.2000/-ಗಳಂತೆ ಮೂರು ಕಂತುಗಳಲ್ಲಿ ರೈತರಿಗೆ ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತದೆ.ಯೋಜನೆಯ ಪ್ರಾರಂಭದಿಂದ ಇಲ್ಲಿಯವರೆಗೆ ರೂ. 10933.20 ಕೋಟಿ ರೂ.ಗಳ ಆರ್ಥಿಕ ನೆರವನ್ನು ರೈತರಿಗೆ ನೀಡಲಾಗಿರುತ್ತದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!