ಸಿ. ಪ್ರಜ್ಞಾ ಅಬಾಕಸ್‌ನಲ್ಲಿ ಚಾಂಪಿಯನ್ ಶಿಫ್

ಚಾಂಪಿಯನ್ ಶಿಫ್
ದಾವಣಗೆರೆ: ಗ್ಯಾಲಕ್ಸಿ ಎಜು ಇನ್ನೋವೇಶನ್ ವತಿಯಿಂದ ಈಚೆಗೆ ಗೋವಾದಲ್ಲಿ ನಡೆದ ೩ನೇ ರಾಷ್ಟ್ರಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆಯಲ್ಲಿ ನಗರದ ಲಿಟಲ್ ಜೀನಿಯಸ್ ಅಬಾಕಸ್ ಸೆಂಟರ್‌ನ ವಿದ್ಯಾರ್ಥಿ ಹಾಗೂ ಗ್ರಾಜುಯೇಷನ್ ಪಡೆದಿರುವ ಕು|| ಸಿ. ಪ್ರಜ್ಞಾ ಇವರು ಚಾಂಪಿಯನ್ ಶಿಫ್ ಪಡೆದಿದ್ದಾರೆ.
ನಗರದ ಕವಿತಾ ಅವರ ಪುತ್ರಿಯಾದ ಪ್ರಜ್ಞಾ ಅವರು ರಾಷ್ಟೋತ್ಥಾನ ಶಾಲೆಯಲ್ಲಿ ೭ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಇವರಿಗೆ ಶಾಲೆಯಿಂದ ಹಾಗೂ ಲಿಟಲ್ ಜೀನಿಯಸ್ ಅಬಾಕಸ್ ಸೆಂಟರ್‌ನಿಂದ ಅಭಿನಂದನೆ ಸಲ್ಲಿಸಲಾಗಿದೆ.
