ಡಾನ್ ಬಾಸ್ಕೋ ಚಾರಿಟೆಬಲ್ ಸೊಸೈಟಿಯಿಂದ ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹ

ದಾವಣಗೆರೆ, – ಇಲ್ಲಿನ ಎಸ್.ಜೆ.ಎಮ್ ನಗರದಲ್ಲಿ ಇಂದು ಮಕ್ಕಳ ಸಹಾಯವಾಣಿ ( 1098 ) ಕೊಲ್ಯಾಬ್, ಡಾನ್ ಬಾಸ್ಕೋ ಚಾರಿಟೆಬಲ್ ಸೊಸೈಟಿಯಿಂದ ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು.
ಸಪ್ತಾಹದ ಅಂಗವಾಗಿ ಪ್ರಮುಖ ರಸ್ತೆಗಳಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಜಾಗೃತಿ ಬೈಕ್ ರ್ಯಾಲಿ ನಡೆಸಲಾಯಿತು. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ವೈ. ರಾಮನಾಯ್ಕ ಚಾಲನೆ ನೀಡಿದರು.
ಸಪ್ತಾಹದ ಅಂಗವಾಗಿ ಚೈಲ್ಡ್ ಲೈನ್ ಜಾಗೃತಿ ಬಿತ್ತಿ ಪತ್ರಗಳನ್ನು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ವೈ. ರಾಮನಾಯ್ಕ, ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕ ಫಾ. ಸಿರಿಲ್ ಸಗಾಯರಾಜ್, ಗೀತೆ ರಚನೆಕಾರರಾದ ಆರೋಗ್ಯಸ್ವಾಮಿ ಹಾಗೂ ಮಕ್ಕಳ ಸಹಾಯವಾಣಿ ಕೊಲ್ಯಾಬ್, ಡಾನ್ ಬಾಸ್ಕೋದ ಸಂಯೋಜಕ ಜಿ.ಎಂ. ಕೊಟ್ರೇಶ್, ಮಕ್ಕಳ ಸಹಾಯವಾಣಿಯ ಕಾರ್ಯಕರ್ತ ಟಿ. ನಾಗರಾಜ , ಆಪ್ತ ಸಮಾಲೋಚಕರಾದ ಜೆ. ಸುನೀತಾ ಬಿಡುಗಡೆ ಮಾಡಿದರು.
ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹದ ಅಂಗವಾಗಿ ಫೋಟೊ ಪ್ರೆಮ್ನೊಂದಿಗೆ ತೆರೆದ ತಂಗುದಾಣದ ಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಆಚರಿಸಲಾಯಿತ್ತು.

