ಲೋಕಲ್ ಸುದ್ದಿ

ದರೋಡೆ, ಅತ್ಯಾಚಾರ, ಗುಂಡಿನ ದಾಳಿ ಭಯದ ನಡುವೆಯೂ ಸುರಕ್ಷಿತವಾಗಿ ಮರಳಿದ ಹಕ್ಕಿ ಪಿಕ್ಕಿ ಜನಾಂಗ 

ದರೋಡೆ, ಅತ್ಯಾಚಾರ, ಗುಂಡಿನ ದಾಳಿ ಭಯದ ನಡುವೆಯೂ ಸುರಕ್ಷಿತವಾಗಿ ಮರಳಿದ ಹಕ್ಕಿ ಪಿಕ್ಕಿ ಜನಾಂಗ 

ದಾವಣಗೆರೆ: ಸೂಡಾನ್‌ ದೇಶದಲ್ಲಿ ಹಿಂಸಾಚಾರದ ವೇಳೆ ಸಿಕ್ಕಿಹಾಕಿಕೊಂಡಿದ್ದ ಭಾರತೀಯರನ್ನು ವಾಪಾಸ್ ಕರೆ ತರುವುದು ಸುಲಭವಾಗಿರಲ್ಲ ಎಂದು ವಿಪತ್ತು ನಿರ್ವಹಣಾ ತಂಡದ ಉಸ್ತುವಾರಿ ಮನೋಜ್ ಹೇಳಿದ್ದಾರೆ.

ಹಿಂಸಾಚಾರ ಆರಂಭವಾಗಿ ಸಂಕಷ್ಟದಲ್ಲಿದ್ದ ಚನ್ನಗಿರಿ ತಾಲ್ಲೂಕಿನ ಒಬ್ಬ ವ್ಯಕ್ತಿ ನನ್ನ ನಂಬರ್ ಹುಡುಕಿ ಕರೆ ಮಾಡಿ ಕಷ್ಟಗಳನ್ನು ಹೇಳಿಕೊಂಡ. ಈ ವೇಳೆ ಆತ ನಾವು 31 ಜನರು ಹಕ್ಕಿ ಪಿಕ್ಕಿ ಜನಾಂಗದವರಿದ್ದೇವೆ ಎಂದು ಹೇಳಿದ. ನಾವು ಕೂಡಲೇ ದಾವಣಗೆರೆ, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಸಂಗ್ರಹಿಸಲು ಹೇಳಿದ್ದೆವು. ನಂತರ 31 ಜನರ ಸಂಖ್ಯೆ 341ಕ್ಕೆ ಏರಿಕೆಯಾಯಿತು ಎಂದವರು ವಿವರಿಸಿದರು.

ದರೋಡೆ, ಅತ್ಯಾಚಾರ, ಗುಂಡಿನ ದಾಳಿ ಭಯದ ನಡುವೆಯೂ ಸುರಕ್ಷಿತವಾಗಿ ಮರಳಿದ ಹಕ್ಕಿ ಪಿಕ್ಕಿ ಜನಾಂಗ 

ಈ ಮಾಹಿತಿಯನ್ನು ಕರ್ನಾಟಕ ರಾಜ್ಯ ವಿಪತ್ತ ನಿರ್ವಹಣಾ ಇಲಾಖೆಗೆ ಕಳುಹಿಸಿ, ನಂತರ ಅವರು ಕೇಂದ್ರ ಸಚಿವಾಲಯಕ್ಕೆ ಕಳುಹಿಸಿದ್ದರು. ಅವರು ನಿತ್ಯದ ಮಾಹಿತಿ ಕಲೆಹಾಕಿದ್ದರು.

ಇದಾದ ನಂತರ ಕಾರ್ತೂಮ್‌ನಲ್ಲಿದ್ದ ಸುಮಾರು 240 ಜನರು ಮೊದಲ ಹಂತದಲ್ಲಿ ಭಾರತಕ್ಕೆ ಮರಳಿದರು. ಅವರು ಬರುವುದು ಅಷ್ಟು ಕಷ್ಟವಾಗಿರಲಿಲ್ಲ. ಆದರೆ ಅತಿಯಾದ ಕಷ್ಟದಲ್ಲಿದ್ದುದು ಅಲ್ಪಶೀರ್ ಹಾಗೂ ಅಂಜುನೈನಾ ದಲ್ಲಿದ್ದವರು.

ದರೋಡೆ, ಅತ್ಯಾಚಾರ, ಗುಂಡಿನ ದಾಳಿ ಭಯದ ನಡುವೆಯೂ ಸುರಕ್ಷಿತವಾಗಿ ಮರಳಿದ ಹಕ್ಕಿ ಪಿಕ್ಕಿ ಜನಾಂಗ 

ಇವರು 2 ಬಸ್‌ನಲ್ಲಿ ತಲಾ 80 ಜನರಂತೆ ಹೊರಟಾಗ ಅನೇಕ ಸಂಕಷ್ಟಗಳು ಎದುರಾಗಿದ್ದವು. ಒಂದು ಬಸ್‌ನ ಮೂರು ಟಯರ್‌ಗಳು ಪಂಕ್ಚರ್ ಆಗಿದ್ದವು. ಮತ್ತೊಂದು ಬಸ್ ಕೆಟ್ಟು ನಿಂತಿತ್ತು. ಆಗ ಲಾರಿಯಲ್ಲಿ ಮತ್ತೊಂದು ಜಾಗಕ್ಕೆ ಕಳುಹಿಸಿಕೊಡಲಾಯಿತು.

ದರೋಡೆ, ಅತ್ಯಾಚಾರ, ಗುಂಡಿನ ದಾಳಿ ಭಯದ ನಡುವೆಯೂ ಸುರಕ್ಷಿತವಾಗಿ ಮರಳಿದ ಹಕ್ಕಿ ಪಿಕ್ಕಿ ಜನಾಂಗ 

ಈ ವೇಳೆ ಮಹಿಳೆಯರ ಮೇಲೆ ಅತ್ಯಾಚಾರವಾಗುವ, ದರೋಡೆಗಳು ನಡೆಯುವ ಸಂಭವಗಳೂ ಇದ್ದವು. ಜೊತೆಗೆ ಬಂದೂಕಿನ ದಾಳಿಗಳು ನಡೆಯುತ್ತಿದ್ದ ವೇಳೆಯೂ ನಮ್ಮ ವಿಪತ್ತು ನಿರ್ವಹಣಾ ತಂಡ ಧೈರ್ಯ ಗೆಡದೆ ಕೆಲಸ ಮಾಡಿತ್ತು. ದೇವರೇ ಇವರನ್ನೆಲ್ಲಾ ಕಾಪಾಡಿದ್ದಾನೆ ಎಂದು ಘಟನೆಯನ್ನು ವಿವರಿಸಿದರು.

ದರೋಡೆ, ಅತ್ಯಾಚಾರ, ಗುಂಡಿನ ದಾಳಿ ಭಯದ ನಡುವೆಯೂ ಸುರಕ್ಷಿತವಾಗಿ ಮರಳಿದ ಹಕ್ಕಿ ಪಿಕ್ಕಿ ಜನಾಂಗ 

ಸೂಡಾನ್‌ನಲ್ಲಿರುವ ಎಲ್ಲರೂ ಸುರಕ್ಷತವಾಗಿ 14 ವಿಮಾನದಲ್ಲಿ 440 ಜನರು ಬಂದಿರುವುದು ಚಿಕ್ಕ ಕೆಲಸವಲ್ಲ.ದೆಹಲಿ ಹಾಗೂ ಕರ್ನಾಟಕದ ತಂಡ ಇವರನ್ನು ವಾಪಾಸ್ ಕರೆ ತರಲು ರಾತ್ರಿ ಹಗಲು ಶ್ರಮಿಸಿದೆ. ಅನೇಕ ಇಲಾಖೆಗಳು ಉತ್ತಮ ಸಹಕಾರ ನೀಡಿವೆ. ಕೆಎಸ್ಸಾರ್ಟಿಸಿ ಉತ್ತಮ ಸೇವೆ ಕೊಟ್ಟಿದ್ದಾರೆ. ವೈದ್ಯ ತಂಡವರು ಆರೋಗ್ಯ ತಪಾಸಣೆ ಮಾಡಿದ್ದಾರ. ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಇದೆಲ್ಲಾ ನಡೆದಿದೆ ಎಂದು ಮನೋಜ್ ಹೇಳಿದರು.

Click to comment

Leave a Reply

Your email address will not be published. Required fields are marked *

Most Popular

To Top