ಜಗಳೂರು: ಚುನಾವಣೆ ಪ್ರಾರಂಭವಾಗಿದ್ದು ಉಮೇದುವಾರಿಕೆ ಸಲ್ಲಿಸುವ ದಿನವೇ ಜಗಳೂರಿನಲ್ಲಿ ಕುರುಡು ಕಾಂಚಣ ಸದ್ದು ಮಾಡುತ್ತಿದೆ.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕಾಂಗ್ರೆಸ್ ಕಾರ್ಯ ಕರ್ತರ ಸಭೆ ನಡೆದಿದ್ದು, ಇಲ್ಲಿ ಸೇರಿದ್ದ ಕಾರ್ಯಕರ್ತರಿಗೆ ಊಟದ ವ್ಯೆವಸ್ಥೆ ಮಾಡಲಾಗಿತ್ತು.
ಸಾವಿರಾರು ಕಾರ್ಯಕರ್ತರು ಊಟ ಸವಿದರು. ಹೆಚ್ಚಿನ ಜನ ಸಂಖ್ಯೆಯಲ್ಲಿ ಜನಸೇರಿದ್ದರಿಂದ ಊಟ ಮತ್ತು ನೀರಿಗೆ ಕಿತ್ತಾಟ ನಡೆಯಿತು.
ಸ್ಥಳದಲ್ಲಿ ಚುನಾವಣೆಗೆ ಸಂಭಂದಿಸಿದ ಅಧಿಕಾರಿಗಳು ಯಾರು ಕಂಡು ಬರಲಿಲ್ಲ ಇದನ್ನು ನೋಡಿದರೆ ರಾಜಕೀಯ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂಬ ಮಾತು ಸಾರ್ವಜನಿಕರಲ್ಲಿ ಕೇಳಿಬಂತು.
ಪಟ್ಟಣದ ಶಿವ ಬಾರ್ ಮುಂಭಾಗವೂ ಕಾರ್ಯಕರ್ತರ ಜಾತ್ರೆ ನಡೆದಿತ್ತು. ಮಧ್ಯ ಖರಿದಿಸಲು ನೂಕು ನಗ್ಗಲು ಉಂಟಾಗಿತ್ತು. ಬಾರ್ ಮುಂಭಾಗದಲ್ಲಿ ರಸ್ತೆ ಬದಿಯಲ್ಲಿ ಮದ್ಯ ಪ್ರೀಯರು ಮದ್ಯ ಸೇವನೆ ಮಾಡುತ್ತಿರುವುದು ಸಾಮಾನ್ಯವಾಗಿತ್ತು.
ರಾಜಕೀಯ ಪಕ್ಷಗಳು ತಮ್ಮನ್ನು ಕಾರ್ಯಕ್ರಮಕ್ಕೆ ಬರುವ ಕಾರ್ಯ ಕರ್ತರಿಗೆ ಮದ್ಯ ಹಂಚುವುದು ಸಾಮಾನ್ಯವಾಗಿತ್ತು. ಸ್ಪಷ್ಟವಾಗಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದ್ದು, ಚುನಾವಣಾಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ.
