ಮದರಸಾಗಳಲ್ಲಿ ದೇಶದ್ರೋಹದ ಪಾಠ! ರೇಣುಕಾಚಾರ್ಯ
ದಾವಣಗೆರೆ : ರಾಜ್ಯದಲ್ಲಿರುವ ಮದರಸಾಗಳು ಮಕ್ಕಳಿಗೆ ದೇಶದ್ರೋಹದ ಪಾಠ ಮಾಡುತ್ತಿವೆ. ಮದರಸಾದ ಮಕ್ಕಳು ಭಾರತ್ ಮಾತಾಕಿ ಜೈ ಎಂದು ಹೇಳಲ್ಲ. ಮದರಸಾಗಳು ಏಕೆ ಬೇಕು? ಅಲ್ಲಿ ಏನು ಬೋಧನೆ ಮಾಡುತ್ತಾರೆ, ಅವುಗಳನ್ನು ಬ್ಯಾನ್ ಮಾಡಬೇಕು ಎಂದು ಹೊನ್ನಾಳಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹೇಳಿದರು. ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮದರಸಾದಲ್ಲಿ ಮುಗ್ಧ ಮಕ್ಕಳ ಮೇಲೆ ಪ್ರಚೋಧನಾಕಾರಿ ಪಾಠ ಮಾಡಲಾಗುತ್ತಿದೆ. ಬಳಿಕ ಆ ಮಕ್ಕಳು ದೇಶದ ವಿರುದ್ಧ ತಿರುಗಿ ಬೀಳುತ್ತಾರೆ. ಭಾರತ್ ಮಾತಾಕಿ ಜೈ ಎಂದು ಆ ಮಕ್ಕಳು ಹೇಳಲ್ಲ ಎಂದರು.
ನೆಲದ ಕಾನೂನು ಗೌರವಿಸದವರನ್ನು ಬ್ಯಾನ್ ಮಾಡಬೇಕು. ಕೋರ್ಟ್ ಸರ್ಕಾರದ ಸಮವಸ್ತç ಆದೇಶವನ್ನು ಎತ್ತಿ ಹಿಡಿದಿದೆ. ಆದರೂ ತೀರ್ಪನ್ನು ವಿರೋಧಿಸಿ ಕೆಲವು ಸಂಘಟೆನೆಗಳು ಬಂದ್‌ಗೆ ಕರೆಕೊಟ್ಟಿದ್ದವು. ತೀರ್ಪು ಬಂದ ನಂತರ ಅದನ್ನು ವಿರೋಧಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಎಂಬುದು ಯಾವ ರೀತಿಯ ನ್ಯಾಯ ಎಂದರು.
ನಾನು ನಕಲಿ ಜಾತಿ ಪ್ರಮಾಣ ಪತ್ರ ಕೊಡಿಸಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ :
ನಾನು ಯಾವುದೇ ನಕಲಿ ಪ್ರಮಾಣ ಪತ್ರ ಪಡೆದಿಲ್ಲ. ಯಾವುದೇ ಸರ್ಕಾರಿ ಸೌಲಭ್ಯ ಪಡೆದಿಲ್ಲ. ಅದು ಸತ್ಯಕ್ಕೆ ದೂರವಾದ ವಿಚಾರ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸ್ಪಷ್ಟನೆ ನೀಡಿದರು. ನನ್ನ ಮಗಳ ಹೆಸರಿನಲ್ಲಿ ನಕಲಿ ಸರ್ಟಿಫಿಕೆಟ್ ಪಡೆದಿಲ್ಲ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯನೋ. ನಾನು ಹೇಳೋದು ಅಷ್ಟೇ ಸತ್ಯ.ನಾನು ಬೂಟಾಟಿಕೆ ಮಾಡಲು ಹೋಗುವುದಿಲ್ಲ. ಜಾತ್ಯಾತೀತ ವ್ಯಕ್ತಿ. ಯಾವುದೇ ಒಂದು ಧರ್ಮಕ್ಕೆ ಸೇರಿದವನಲ್ಲ. ಎಲ್ಲರನ್ನೂ ಸಮಾನಾಗಿ ಕಾಣುವವನು ಎಂದು ಹೇಳಿದರು.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು ನನ್ನ ಮಿತ್ರರು. ರೇಣುಕಾಚಾರ್ಯರ ಮಗಳು ಫೇಕ್ ಸರ್ಟಿಫಿಕೇಟ್ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ಸ್ಪಷ್ಟೀಕರಣ ಕೇಳಿದ್ದಕ್ಕೆ ನೀಡಿದ್ದೇನೆ. ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವ ಮಾಧುಸ್ವಾಮಿ ಅವರು ಸಹ ಸದನ ಇರೋದು ವ್ಯಕ್ತಿಗೆ ಶಿಕ್ಷೆ ಕೊಡುವುದಕ್ಕಲ್ಲ. ಈ ಬಗ್ಗೆ ಚರ್ಚೆ ಬೇಡ. ದೂರು ಕೊಡಿ ಎಂದಿದ್ದಾರೆ. ಆದರೆ ಕಾಂಗ್ರೆಸ್ ಕೆಲ ಶಾಸಕರು, ವಿಪಕ್ಷ ನಾಯಕ ಸಿದ್ದರಾಮಯ್ಯ ವಿನಾಕಾರಣ ಆರೋಪ ಮಾಡುತ್ತಾ ಸದನ ಹಾಳು ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ತಪ್ಪು ಮಾಡಿದ್ದರೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಲಿ. ಅಂಬೇಡ್ಕರ್ ಅವರ ಸಂವಿದಾನದಂತೆ ನಡೆದಿದ್ದೇನೆ. ಸಂವಿಧಾನಕ್ಕೆ ಗೌರವ ನೀಡುತ್ತೇನೆ. ಕಾಂಗ್ರೆಸ್‌ನ ಮುಖಂಡರು, ಹೊನ್ನಾಳಿ ಮಾಜಿ ಶಾಸಕರು ನನ್ನ ಮೇಲೆ ವಿನಾಕಾರಣ ಆರೋಪ ಮಾಡುತ್ತಾ ಜನರನ್ನು ತಪ್ಪು ದಾರಿಗೆ ಕರೆದೊಯ್ಯುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಹೊನ್ನಾಳಿಯಲ್ಲಿ ಶಾಸಕರಾಗಿದ್ದಾಗ ಶಾಂತನಗೌಡರು ದಲಿತರಿಗೆ ಏನು ಮಾಡಿದ್ದಾರೆ. ಮಧ್ಯವರ್ತಿಗಳ ಮೂಲಕ ಸರ್ಕಾರದ ಯೋಜನೆ ಕೊಡಿಸಿದ್ದಾರೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ ಎಂದು ರೇಣುಕಾಚಾರ್ಯ ಸವಾಲು ಹಾಕಿದ್ದಾರೆ. ನಾನು ಸರ್ಕಾರಿ ಸೌಲಭ್ಯ ಪಡೆದಿದ್ದೇನೆಂದು ಕಾಂಗ್ರೇಸ್ ವಕ್ತಾರ ಸುಳ್ಳು ಆರೋಪ ಮಾಡಿದ್ದಾರೆ. ನಾನು ಇದನ್ನು ಸಹಿಸುವುದಿಲ್ಲ. ಇವರ ವಿರುದ್ದ ಮಾನನಷ್ಟ ಮೊಕದ್ದಮ್ಮೆ ಹಾಕುತ್ತೇನೆಂದು ರೇಣುಕಾಚಾರ್ಯ ಎಚ್ಚರಿಕೆ ನೀಡಿದರು.