ದಾವಣಗೆರೆಯಲ್ಲಿ ರೇಣುಕಾಚಾರ್ಯ ಬೆಂಬಲಿಗ ಆತ್ಮಹತ್ಯೆಗೆ ಯತ್ನ
ದಾವಣಗೆರೆ ಎಂ ಪಿ ರೇಣುಕಾಚಾರ್ಯ ಬೆಂಬಲಿಗ ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಜಗಳೂರು ಕ್ಷೇತ್ರದ ಕಾರ್ಯಕರ್ತ ಉಮೇಶ್ ಬಳ್ಳಾರಿ ಮೈ ಮೇಲೆ ಡಿಸೆಲ್ ಸುರಿದುಕೊಂಡು ಬೆಂಕಿ ಹಚ್ಚಿ ಕೊಳ್ಳಲು ಯತ್ನಿಸಿದವರು.
ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಹೆಸರು ಪ್ರಕಟಿಸಿರುವುದನ್ನು ಖಂಡಿಸಿ ಶಿರಮಗೊಂಡನಹಳ್ಳಿಯಲ್ಲಿರುವ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಅವರ ನಿವಾಸದಲ್ಲಿ ಸಿದ್ದೇಶ್ವರ ವಿರೋಧಿ ಬಣದವರು ಸಭೆ ನಡೆಸಿದರು.
ಗೋ ಬ್ಯಾಕ್ ಸಿದ್ದೇಶ್ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು,ಸಿದ್ದೇಶ್ ಹಠಾವೋ ದಾವಣಗೆರೆ ಬಚಾವೋ ಎಂಬ ಘೋಷಣೆಯನ್ನು ವಿರೋಧಿ ಬಣದ ಕಾರ್ಯಕರ್ತರು ಕೂಗಿದರು .
ಅಭ್ಯರ್ಥಿ ಬದಲಾವಣೆ ಮಾಡಬೇಕೆಂದು ಪಕ್ಷದ ಹೈ ಕಮಾಂಡ್‌ಗೆ ಆಗ್ರಹಿಸಿದ್ದಾರೆ