ಚುನಾವಣಾ ತರಬೇತಿ ವೇಳೆ ಚನ್ನಗಿರಿಯಲ್ಲಿ ಶಿಕ್ಷಕನಿಗೆ ಹೃದಯಾಘಾತ: ಚಿಕಿತ್ಸೆ ಫಲಿಸದೆ ಸಾವು.

ದಾವಣಗೆರೆ: ಚುನಾವಣಾ ತರಬೇತಿ ವೇಳೆ ಶಿಕ್ಷಕನಿಗೆ ತೀವ್ರ ಹೃದಯಾಘಾತವಾಗಿ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಶಿಕ್ಷಕ ಸಾವನ್ನಪ್ಪಿದ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಸಂತೆಬೆನ್ನೂರು ವಿಜಯ ಪ್ರೌಢ ಶಾಲೆಯ ಶಿಕ್ಷಕ ಬೆಳ್ಳಿಗನೂಡು ಶ್ರೀನಿವಾಸ್ ಮೃತರಾದ ಶಿಕ್ಷಕ.
ಚುನಾವಣೆ ಸಿಬ್ಬಂದಿ ಎಆರ್ ಓಗಳಿಗೆ ಇಂದು ತರಬೇತಿ ನೀಡಲಾಗುತ್ತಿತ್ತು. ತರಬೇತಿ ವೇಳೆಯೇ ಕುಸಿದು ಬಿದ್ದಿದ್ದ ಶಿಕ್ಷಕ ಶ್ರೀನಿವಾಸ್ ರನ್ನ ಚನ್ನಗಿರಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ ಅಧಿಕಾರಿಗಳು. ದುರದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಶಿಕ್ಷಕ ಶ್ರೀನಿವಾಸ್ ಸಾವನ್ನಪ್ಪಿದರು.
ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿತ್ತು.