ಜಗಳೂರಿನಲ್ಲಿ ಟ್ರಾಕ್ಟರ್ ಲಾರಿ ನಡುವೆ ಭೀಕರ ಅಪಘಾತ.! 6 ಜನರಿಗೆ ಗಂಭೀರ ಗಾಯ

ದಾವಣಗೆರೆ: ಟ್ರಾಕ್ಟರ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ 6 ಜನ ಗಂಭೀರ ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೌರಿಪುರ ಗ್ರಾಮದ ಬಳಿ ಮಂಗಳವಾರ ಸಂಜೆ ಸಂಭವಿಸಿದೆ.
ಕೂಡ್ಲಿಗಿ ತಾಲೂಕಿನ ಹುಲಿಕುಂಟೆ ಗ್ರಾಮದ ನಿವಾಸಿಗಳು
ಗಾಣಗಟ್ಟೆ ಗ್ರಾಮಕ್ಕೆ ದೇವರ ದರ್ಶನಕ್ಕೆಂದು ಹೋಗಿ ವಾಪಸ್ ತಮ್ಮ ಗ್ರಾಮಕ್ಕೆ ತೆರಳುತಿದ್ದ ವೇಳೆ ವೇಗವಾಗಿ ಬಂದ ಲಾರಿ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದಿದೆ.
ಹುಲಿಕುಂಟೆ ಗ್ರಾಮಸ್ಥರು ಸುಮಾರು 20 ಜನರು ಟ್ರಾಕ್ಟರ್ ನಲ್ಲಿದ್ದು ಇದ್ದರಲ್ಲಿದ್ದ 4 ಜನರಿಗೆ ಗಂಭೀರ ಗಾಯಗಳಾಗಿದ್ದು ಮತ್ತು ಇಬ್ವರಿಗೆ ಸಣ್ಣಪುಟ್ಟ ಗಾಯಗಳಾಗಳಾಗಿವೆ. ಗಾಯಾಳುಗಳನ್ನು ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ಜಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ.
ಈ ಘಟನೆ ಜಗಳೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದ್ದು ತನಿಖೆ ಮುಂದುವರಿದಿದೆಟ
