ದಾವಣಗೆರೆ: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಏಪ್ರಿಲ್ 20 ರವರೆಗೆ ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಿಂದ 115 ಅಭ್ಯರ್ಥಿಗಳಿಂದ 164 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಜಗಳೂರು ಕ್ಷೇತ್ರ 15 ನಾಮಪತ್ರ 12 ಅಭ್ಯರ್ಥಿಗಳು , ಹರಿಹರ 21 ನಾಮಪತ್ರ 13 ಅಭ್ಯರ್ಥಿ, ದಾವಣಗೆರೆ ಉತ್ತರ 23 ನಾಮಪತ್ರ 16 ಅಭ್ಯರ್ಥಿ, ದಾವಣಗೆರೆ ದಕ್ಷಿಣ 32 ನಾಮಪತ್ರ 23, ಮಾಯಕೊಂಡ 38 ನಾಮಪತ್ರ 24 ಅಭ್ಯರ್ಥಿಗಳು, ಚನ್ನಗಿರಿ 19 ನಾಮಪತ್ರ 15 ಅಭ್ಯರ್ಥಿಗಳು ಹಾಗೂ ಹೊನ್ನಾಳಿಯಲ್ಲಿ 16 ನಾಮಪತ್ರ 12 ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿವೆ.
