ಬೆಳಗಾವಿ: ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಮತದ ಹಕ್ಕು ಚಲಾಯಿಸಲು ನಗರದ ಗೃಹಿಣಿಯೊಬ್ಬರು ಜರ್ಮನಿಯಿಂದ ಬಂದು, ಮಾದರಿಯಾದರು.
ನಗರ ಮೂಲದ ಜರ್ಮನಿ ನಿವಾಸಿ ರಶ್ಮಿ ಶ್ರೀಕಾಂತ ಕಲಾಲ್ ಅವರು, ಬೆಳಗಾವಿ ಉತ್ತರ ಮತಕ್ಷೇತ್ರದ ಮತಗಟ್ಟೆಯಲ್ಲಿ, ಸರದಿಯಲ್ಲಿ ನಿಂತು ತಮ್ಮ ಮತ ಚಲಾಯಿಸಿದರು.
ಬುಧವಾರ ಬೆಳಿಗ್ಗೆಯೇ ವಿಮಾನದ ಮೂಲಕ ಸಾಂಬ್ರಾ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಕುಟುಂಬದವರು ನೇರವಾಗಿ ಮತಗಟ್ಟೆಗೆ ಕರೆತಂದರು.
ರಶ್ಮಿ ಅವರ ಪತಿ ಜರ್ಮನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಮದುವೆಯ ಬಳಿಕ ರಶ್ಮಿ ಕೂಡ ಅಲ್ಲೇ ನೆಲೆಸಿದ್ದಾರೆ.
