ಗರ್ಭದಿಂದ ಗೋರಿಗೆ ಹೋಗುವವರೆಗೂ ಪುರುಷನ ಬೆನ್ನೆಲುಬಾಗಿ ನಿಲ್ಲುವ ಮಹಿಳೆ : ಎಂ.ಬಿ. ನಾಗರಾಜ್ ಕಾಕನೂರು

ದಾವಣಗೆರೆ : ಪುರುಷ ಗರ್ಭದಿಂದ ಗೋರಿಗೆ ಹೋಗುವವರೆಗೆ ಆತ ಮಾಡುವ ಪ್ರತಿಯೊಂದು ಕೆಲಸದಲ್ಲಿ ಮಹಿಳೆಯ ಪಾತ್ರ ಅನನ್ಯವಾದದ್ದು. ಇಂತಹ ಮಹಿಳೆಯರನ್ನು ಗೌರವಿಸುವ ಕೆಲಸ ಪುರುಷರಿಂದ ಆಗಬೇಕು ಎಂದು ಸಾಹಿತಿ ಎಂ.ಬಿ. ನಾಗರಾಜ್ ಕಾಕನೂರು ಹೇಳಿದರು. ದಾವಣಗೆರೆ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಬಿ.ಎಂ. ವಾಗೀಶ್‌ಸ್ವಾಮಿ ಅಭಿಮಾನಿ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಸಮಾವೇಶ ಮತ್ತು ನಗೆಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುರುಷನ ಪ್ರತಿಯೊಂದು ಕೆಲಸದಲ್ಲಿ ಮಹಿಳೆ ಬೆನ್ನೆಲುಬಾಗಿ ನಿಂತಿರುತ್ತಾಳೆ. ಜೀವ, ಭಾವ, ಭಾವನೆ, ಧೈರ್ಯ ತುಂಬಿ ಬದುಕು ಕಟ್ಟಿಕೊಡುವವಳು ಹೆಣ್ಣು. ನಾವು ಹೆಣ್ಣನ್ನು ಕಡೆಗಣಿಸಿದರೆ ನಿಂತ ನೀರಾಗುತ್ತೇವೆ. ಮಹಿಳೆ ಮಗನ ಜನನಕ್ಕಾಗಿ ತನ್ನ ಸೌಂದರ್ಯವನ್ನೇ ಕಳೆದುಕೊಳ್ಳುತ್ತಾಳೆ, ಆದರೆ ಮಗ ಒಂದು ಹೆಣ್ಣಿಗಾಗಿ ತಾಯಿಯನ್ನೇ ದೂರ ತಳ್ಳುತ್ತಾನೆ. ಕುಟುಂಬದ ಜ್ಯೋತಿ ಹೆಣ್ಣು. ಇಂತಹ ಹೆಣ್ಣನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಹಾಗೆಯೇ ನೂರು ಮೆದುಳಿಗೆ ಅರಿಯದ ಕೆಲಸ ಒಂದು ತಾಯಿಯ ಮೆದುಳಿಗೆ ಅರಿವಾಗುತ್ತೆ. ಇಂತಹ ತ್ಯಾಗ ಜೀವಿ ತಾಯಿಯನ್ನು ಜೀವ ಇರುವ ತನಕ ಸ್ಮರಿಸಬೇಕು. ಈ ಉದ್ದೇಶದಿಂದಲೇ ಎಂ.ಬಿ. ವಾಗೀಶ್‌ಸ್ವಾಮಿ ಅಭಿಮಾನಿ ಬಳಗದಿಂದ ಮಹಿಳೆಯರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯವೇ ಸರಿ ಎಂದರು. ಈ ಸಂದರ್ಭದಲ್ಲಿ ಡಿ. ಹೆಚ್. ಪ್ರಕಾಶ್, ರವಿ, ಶಾಂತಕುಮಾರ್, ಕುಬೇರಪ್ಪ, ಗಿರಿಸಿದ್ದಪ್ಪ, ಸಣ್ಣಗೌಡ್ರು, ಮಂಜಪ್ಪ, ಶ್ರೀನಿವಾಸ್, ನಾಗರಾಜಪ್ಪ, ಪೂಜಾರ್ ಮಹೇಶಪ್ಪ, ಸೋಮಶೇಖರಪ್ಪ, ಕಾಕನೂರ್ ನಾಗರಾಜಪ್ಪ, ಮಹರುದ್ರಪ್ಪ ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!