ACB Raid: ದಾವಣಗೆರೆಯಲ್ಲಿ ಎಸಿಬಿ ದಾಳಿ: ಜಿಲ್ಲಾ ಪರಿಸರ ಅಧಿಕಾರಿ DEO ಬಳಿ ಅಪಾರ ಪ್ರಮಾಣದ ಆಸ್ತಿ ಪತ್ತೆ.!

Big Breaking Exclusive Report by H M P KUMAR

ದಾವಣಗೆರೆ: ದಾವಣಗೆರೆ ಜಿಲ್ಲೆಯ ಮಾಲಿನ್ಯ ನಿಯಂತ್ರಣ Pollution control board ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ District Environment Officer ಎಂ.ಎಸ್. ಮಹೇಶ್ವರಪ್ಪ m.s.Maheshwarappa ಇಂದು ಬೆಳಗ್ಗೆಯಿಂದ ಎಸಿಬಿ ಅಧಿಕಾರಿಗಳು ACB Officers ಮನೆ, ಕಚೇರಿ, ಸ್ವಗ್ರಾಮ ಸೇರಿ ಮೂರು ಕಡೆ ದಾಳಿ ನಡೆಸಿ ತಪಾಸಣೆ
ನಡೆಸಿದ್ದಾರೆ.

ದಾವಣಗೆರೆಯ ರಂಗನಾಥ ಬಡಾವಣೆಯ ಸ್ವಂತ ಮನೆ, ಕಚೇರಿ ಹಾಗೂ ಕಂಸಾಗರದ ಸ್ವ ಗ್ರಾಮದ ಮನೆ ಮೇಲೆ ಏಕಕಾಲಕ್ಕೆ ಎಸಿಬಿ ಎಸ್ ಪಿ ಜಯಪ್ರಕಾಶ್ ನೇತೃತ್ವದಲ್ಲಿ ಡಿವೈಎಸ್ಪಿ, ಮಂಜುನಾಥ್ ಇನ್ಸ್‌ಪೆಕ್ಟರ್ ಮಧುಸೂದನ್, ರವೀಂದ್ರ, ಚಿತ್ರದುರ್ಗದ ಸುದೀರ್, ಪ್ರವೀಣ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.

ಮಹೇಶ್ವರಪ್ಪ ಮೂಲತಃ ಚನ್ನಗಿರಿ ತಾಲೂಕಿನ ಕಂಸಾಗರ ಗ್ರಾಮದವರು, ಮಹೇಶ್ವರಪ್ಪ ನವರಿಗೆ ಸೇರಿದಂತಹ ಆಸ್ತಿಗಳ ದಾಖಲೆಗಳನ್ನ ಅಧಿಕಾರಿಗಳ ತಂಡ ಪರಿಶೋಧನೆ ನಡೆಸುತ್ತಿದೆ.

ದಾವಣಗೆರೆ ಜಿಲ್ಲಾ ಪರಿಸರ ಅಧಿಕಾರಿ ಮಹೇಶ್ವರಪ್ಪನವರ ಬಳಿ ದಾವಣಗೆರೆಯಲ್ಲಿ ಒಟ್ಟು 10 ಮನೆಗಳು, 10 ಎಕರೆ ಜಮೀನು, ಒಂದು‌ ಕಾರ್, ಒಂದು ಬೈಕ್ ಪತ್ತೆಯಾಗಿದ್ದು, ಬೆಳ್ಳಿ, ಬಂಗಾರ, ನಗದು ಕೂಡ ಪತ್ತೆಯಾಗಿದ್ದು ಏಣಿಕೆ ಕಾರ್ಯ ಮುಂದುವರಿದಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!