ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಸ್ಕಾಂ ಪವರ್ ಮ್ಯಾನ್ ಎಸಿಬಿ ಬಲೆಗೆ
ದಾವಣಗೆರೆ: ನಗರದ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಕಚೇರಿ ಎಂ ಟಿ ಉಪ ವಿಭಾಗದಲ್ಲಿ ಪವರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರವಿಕುಮಾರ್ ಲಂಚ ತೆಗೆದುಕೊಳ್ಳುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ದಾವಣಗೆರೆ ವಿಭಾಗಿಯ ಕಚೇರಿ ಆವರಣದಲ್ಲಿರುವ ಗಣೇಶ ದೇವಸ್ಥಾನದ ಮುಂದಿನ ಆವರಣದಲ್ಲಿ 5 ಸಾವಿರ ಲಂಚ ತೆಗೆದುಕೊಳ್ಳುವಾಗ ಸಿಕ್ಕಿ ಬಿದ್ದಿರುವ ರವಿಕುಮಾರ್ ಅವರನ್ನು ಎಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಸ್ಕಾಂ ಗ್ರಾಹಕರಾದ ಶ್ರೀರಾಮ್ ಎಂಬುವರು ಹದಡಿ ರಸ್ತೆ ಮಾರುತಿ ಟೆಸ್ಟೈಲ್ ಪಕ್ಕದಲ್ಲಿ ಇರುವ ತಮ್ಮ ಹಿಟ್ಟಿನ ಗಿರಣಿ ನಡೆಸುತ್ತಿದ್ದರು ಅದರ ಹಿಂಬಾಕಿ ಬಿಲ್ಲಿಗೆ 15 ಸಾವಿರ ದಂಡ ಶುಲ್ಕ ಪಾವತಿಸಬೇಕಿದೆ. ಇದನ್ನು ಸರಿಪಡಿಸಲು 5000 ಕೊಡಿ ಎಂದು ಲೈನ್ ಮ್ಯಾನ್ ರವಿಕುಮಾರ್ ಬೇಡಿಕೆ ಇಟ್ಟಿದ್ದಾನೆ. ಅದನ್ನು ಕೊಡಲು ಒಪ್ಪದ ಗಿರಣಿ ಮಾಲೀಕರು ನಿನ್ನೆ ಎಸಿಬಿಗೆ ದೂರನ್ನು ಸಲ್ಲಿಸಿದ್ದರು.
ಇಂದು ಸಂಜೆ ಗಣೇಶ ದೇವಸ್ಥಾನದ ಆವರಣದಲ್ಲಿ ಗಿರಣಿ ಮಾಲೀಕರು ರವಿಕುಮಾರ್ ಗೆ ನಗದು ಹಣ ಕೊಡುವುದಾಗಿ ತಿಳಿಸಿದ್ದು, ತೆಗೆದುಕೊಳ್ಳುವಾಗ ಎಸಿಬಿ ಬಲೆಗೆ ರವಿಕುಮಾರ್ ಬಿದ್ದಿದ್ದಾನೆ.