ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ ವ್ಯಕ್ತಿ ಮೇಲೆ ಕ್ರಮ

ನವದೆಹಲಿ: ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ನ್ಯೂಯಾರ್ಕ್‌ನಿಂದ ದೆಹಲಿಗೆ ಆಗಮಿಸುತ್ತಿದ್ದಾಗ ಪ್ರಯಾಣಿಕನೊಬ್ಬ ಕುಡಿದ ಮತ್ತಿನಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ನ.26ರಂದು ನಡೆದಿತ್ತು.
ಕುಡಿದು ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಯಾಣಿಕರನ್ನು ನೊ ಫ್ಲೈ ಲಿಸ್ಟ್‌ಗೆ ಸೇರಿಸಬಹುದು ಎಂದು ಏರ್‌ಲೈನ್ಸ್ ಇಂದು ತಿಳಿಸಿದೆ.
ಕಿಡಿಗೇಡಿಯು 70 ರ ಮಹಿಳಾ ಪ್ರಯಾಣಿಕರೊಬ್ಬರ ಎದುರು ಪ್ಯಾಂಟಿನ ಜಿಪ್ ತೆಗೆದು ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆಯ ಕುರಿತು ಮಹಿಳೆಯು ಸಿಬ್ಬಂದಿಗೆ ದೂರು ನೀಡಿದ್ದು, ತನ್ನ ಬಟ್ಟೆ, ಬೂಟುಗಳು ಮತ್ತು ಬ್ಯಾಗ್ ಮೂತ್ರದಲ್ಲಿ ತೊಯ್ದಿದೆ ಎಂದು ತಿಳಿಸಿದ್ದಾರೆ.
ಊಟದ ನಂತರ ಲೈಟ್ ಡಿಮ್ ಮಾಡಿದಾಗ ಈ ಘಟನೆ ನಡೆದಿದೆ. ಮೂತ್ರ ವಿಸರ್ಜನೆಯ ನಂತರ, ಇನ್ನೊಬ್ಬ ಪ್ರಯಾಣಿಕರು ಆತನನ್ನು ಹೊರಡುವಂತೆ ಹೇಳುವವರೆಗೂ ವ್ಯಕ್ತಿ ಅಲ್ಲಿಯೇ ನಿಂತಿದ್ದ ಎನ್ನಲಾಗಿದೆ.
ಸಿಬ್ಬಂದಿ ಮಹಿಳೆಗೆ ಬಟ್ಟೆ ಮತ್ತು ಚಪ್ಪಲಿ ನೀಡಿ ತಮ್ಮ ಸೀಟಿಗೆ ಹಿಂತಿರುಗುವಂತೆ ಹೇಳಿದ್ದಾರೆ. ಮಹಿಳೆ ಟಾಟಾ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಪತ್ರ ಬರೆದ ನಂತರ ವಿಮಾನಯಾನ ಸಂಸ್ಥೆ ಕ್ರಮ ಕೈಗೊಂಡಿದೆ.