ಮಾಜಿ ಸೈನಿಕರು, ಅವಲಂಭಿತರ ಕುಂದುಕೊರತೆ ನಿವಾರಿಸಲು ಕ್ರಮ
ದಾವಣಗೆರೆ : ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಮಾಜಿ ಸೈನಿಕರು, ಅವರ ಅವಲಂಭಿತರು ಹಾಗೂ ವೀರ ನಾರಿಯರ ಕುಂದು ಕೊರತೆ ಪರಿಹರಿಸುವ ಉದ್ದೇಶದಿಂದ ಜಿಲ್ಲಾ ಸೈನಿಕ ಮಂಡಳಿಯ ಪ್ರಸಕ್ತ ಸಾಲಿನ ಪ್ರಥಮ ತ್ರೈಮಾಸಿಕ ಸಭೆಯನ್ನು ಆಯೋಜಿಸಲಾಗಿದೆ.
ಕುಂದುಕೊರೆತೆಗಳ ಸಾರ್ವತ್ರಿಕ ಅಂಶಗಳಿದ್ದಲ್ಲಿ ಪ್ರಿಲ್ 25 ರೊಳಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಛೇರಿಗೆ ಲಿಖಿತ ರೂಪದಲ್ಲಿ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಂಖ್ಯೆ 08182-220925 ಸಂಪರ್ಕಿಸಲು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.