ಬಸವಾಪುರ ಗ್ರಾಮದ ಸುತ್ತ ಮುತ್ತ ಕಾಣಿಸಿಕೊಂಡ ಚಿರತೆ ಜಾಗರೂಕರಾಗಿರಲು ಸಲಹೆ

ಬಸವಾಪುರ ಗ್ರಾಮ
ದಾವಣಗೆರೆ: ಇತ್ತಿಚೆಗೆ ಬಸವಾಪುರ ಗ್ರಾಮದ ಸುತ್ತಮುತ್ತ ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಬಸವಾಪುರ ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಜಾಗರೂಕರಾಗಿರುವಂತೆ ಯುವಕರು ಮನವಿ ಮಾಡಿದ್ದಾರೆ.
ಹೊಲ ಕಾಯಲು ಹೋದ ಗ್ರಾಮದ ಯುವಕರಿಗೆ ಚಿರತೆ ಕಂಡಿದೆ. ನಿನ್ನೆಯೂ ಗ್ರಾಮದ ಪಕ್ಕದಲ್ಲಿಯೇ ಮನೆ ಬಳಿ ಬಂದು ನಾಯಿ ಹಿಡಿದುಕೊಂಡು ಹೋಗಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಂತಿಸಾಗರ ವಲಯ ಅರಣ್ಯಧಿಕಾರಿಗಳಾದ ಜಗದೀಶ್. ವಿ ರವರ ಮಾರ್ಗದರ್ಶನದಂತೆ ಅರಣ್ಯ ಸಿಬ್ಬಂದಿಗಳಾದ ಹೇಮಾಂತ್. ವೆಂಕಟೇಶ್. ತಿಪ್ಪೇಶ್. ರಾಮಕೃಷ್ಣ. ರವರು ಗ್ರಾಮದ ಯುವಕರ ಸಹಕಾರದೊಂದಿಗೆ ಚಿರತೆ ಸೆರೆ ಹಿಡಿಯಲು ಕಾರ್ಯಚರಣೆಗೆ ಮುಂದಾಗಿದ್ದಾರೆ. ಚಿರತೆ ಜಾಡು ಹಿಡಿದು ಬೋನ್ ಇಡಲಾಗಿದೆ ಬಸವಾಪುರ ಗ್ರಾಮದ ಸುತ್ತಮುತ್ತಲಿನ ಜನರು ರಾತ್ರಿ ಸಮಯ ಹೊರಗೆ ಬರಬೇಡಿ ದನ ಕರು ನಾಯಿಗಳನ್ನ ಹೊರಗೆ ಕಟ್ಟಬೇಡಿ ರಾತ್ರಿ ಸಮಯ ಸಂಚರಿಸುವಾಗ ಎಚ್ಚರಿದಿಂದಿರಿ ಎಂದು ಯುವಕರು ಮನವಿ ಮಾಡಿದ್ದಾರೆ.