ದಾವಣಗೆರೆಯಲ್ಲಿ ನಾಳೆ ಆಷಾಢ ಮಾಸದ ಅಜ್ಜಿ ಹಬ್ಬ

ದಾವಣಗೆರೆ : ದಾವಣಗೆರೆ ನಗರದ ನಿಟ್ಟುವಳ್ಳಿ ದುರ್ಗಾಂಭಿಕಾ ದೇವಸ್ಥಾನದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಆಷಾಢ ಮಾಸದ ಕೊನೆಯ ಶುಕ್ರವಾರವಾದ ನಾಳೆ ಅಂದರೆ ದಿ. 14-07-2023 ರಂದು ಅಜ್ಜಿ ಹಬ್ಬವನ್ನು ಆಚರಿಸಲಾಗುತ್ತದೆ. ಎಂದು ದೇವಸ್ಥಾನದ ಆಡಳಿತ ಮಂಡಳಿ ಸಾರ್ವಜನಿಕರಿಗೆ ಧ್ವನಿ ವರ್ಧಕದ ಮೂಲಕ ತಿಳಿಯಪಡಿಸಿದ್ದಾರೆ. ಈ ಹಬ್ಬಕ್ಕೆ ಬೇರೆ ಬೇರೆ ಪ್ರದೇಶಗಳಲ್ಲಿ ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಆಷಾಢದಮ್ಮ, ಹೋಳಿಗೆಮ್ಮ , ಅಜ್ಜಿ ಹಬ್ಬ ಎಂದೂ ಕರೆಯಲಾಗುತ್ತದೆ.
ನಿಟ್ಟುವಳ್ಳಿ ದುರುಗಮ್ಮ ದೇವಿ
ಆಷಾಢ ಮಾಸದಲ್ಲಿ ಬರುವ ನಾಲ್ಕು ಶುಕ್ರವಾರಗಳ ನಂತರ ಐದನೇ ಶುಕ್ರವಾರ ಅಜ್ಜಿ ಹಬ್ಬ ವನ್ನು ಆಚರಿಸಲಾಗುತ್ತದೆ. ಅಜ್ಜಿ ಹಬ್ಬವನ್ನು ಚಿಕ್ಕ ಮಕ್ಕಳ ಮೈಮೇಲೆ ಗುಳ್ಳೆಗಳು (ದಡಾರ) ಜ್ವರ , ಅಥವಾ ಅಮ್ಮಾ ಬಂದಿದ್ದರೆ ಅವುಗಳನ್ನು ದೂರ ಮಾಡುವ ಸಲುವಾಗಿ ಈ ಆಚರಣೆ ಮಾಡಲಾವಗುವುದು ಎಂಬ ವಾಡಿಕೆಯಿದೆ.
ಈ ಹಬ್ಬಕ್ಕೆ ತನ್ನದೇ ಆದ ಕೆಲ ಧಾರ್ಮಿಕ ಆಚರಣೆಗಳೂ ಸಹ ಇದೆ. ಅದರಂತೆಯೇ ಹಬ್ಬವನ್ನು ಮಾಡಲಾಗುವುದು. ಸಣ್ಣ ಮಕ್ಕಳಿಗೆಯಾವುದೇ ರೋಗ ರುಜಿನಗಳು ಬಾರದೇ ಇರಲಿ, ದೇವಿ ಇದನ್ನು ತಪ್ಪಿಸಲಿ ಎಂದು ಈ ಅಜ್ಜಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ .