ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದ ಪ್ರತಿಭಟನೆ

IMG-20210913-WA0003

 

ದಾವಣಗೆರೆ :ದೆಹಲಿಯ ಮಹಿಳಾ ಪೊಲೀಸ್ , ಮುಂಬೈ ಮಹಿಳೆ ಹಾಗೂ ಯಾದಗಿರಿಯ ಮಹಿಳೆಯ ಮೇಲೆ ನಡೆದ ಪೈಷಾಚಿಕ ಅತ್ಯಾಚಾರ ಹಾಗೂ ಅಮಾನವೀಯ ಕೊಲೆಯನ್ನು ಖಂಡಿಸಿ ಪ್ರತಿಭಟನೆ . ನಗರದಲ್ಲಿ ಇಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಹಾಗೂ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ ವತಿಯಿಂದ ದೆಹಲಿಯ ಮಹಿಳಾ ಪೊಲೀಸ್ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಬರ್ಬರ ಕೊಲೆಯನ್ನು ಖಂಡಿಸಿ ಎ.ಸಿ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು . ಈ ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು . ಪ್ರತಿಭಟನೆಯಲ್ಲಿ ಎಐಎಮ್.ಎಸ್.ಎಸ್ ನ ಜಿಲ್ಲಾಧ್ಯಕ್ಷೆ ಶ್ರೀಮತಿ ಜ್ಯೋತಿ ಕುಕ್ಕವಾಡ ಮಾತನಅಡುತ್ತ 2012 ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಘಟನೆಯು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು .

ಈಗ ಅದೇ ದೆಹಲಿಯಲ್ಲಿ ಮತ್ತೊಂದು ಘಟನೆ ಇನ್ನೂ ಅಮಾನವೀಯ ಹಾಗೂ ಕ್ರೂರವಾಗಿ ಸಾಬಿಯಾ ಎಂಬ ಮಹಿಳಾ ಪೊಲೀಸ್ ಮೇಲೆ ಸಾಮೂಹಿಕ ಅತ್ಯಾಚಾರ – ಕೊಲೆ ನಡೆದಿದೆ . ಈ ಘಟನೆ ನಡೆದು 15 ದಿನಗಳು ಕಳೆದರೂ ಕೂಡ ಬೆಳಕಿಗೆ ಬಂದಿರಲಿಲ್ಲ . ಸಂತ್ರಸ್ಥೆಯ ಖಾಸಗಿ ಅಂಗಗಳನ್ನು ಕತ್ತರಿಸಿ , ಇಡೀ ದೇಹವನ್ನೆಲ್ಲ ಎಣಿಸಲಾರದಷ್ಟು ಬಾರಿ ಚಾಕುವಿನಿಂದ ಇರಿದು ಕೊಲೆಮಾಡಲಾಗಿದೆ . ಈ ಘಟನೆಗೆ ಸಂಬಧಿಸಿದವರನ್ನು ಕೂಡಲೇ ಪತ್ತೆಹಚ್ಚಿ ಉಗ್ರ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು . ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳಾದ ಭಾರತಿ . ಕೆ ರವರು ಮಾತನಾಡುತ್ತಾ , ಮಹಿಳೆ ಉನ್ನತ ಹುದ್ದೆಯಲ್ಲಿದ್ದರೆ ರಕ್ಷಣೆ ಸಿಗುತ್ತದೆಯೆಂಬ ವಾದ ಈ ಘಟನೆಯಿಂದ ಸುಳ್ಳಾಗಿದೆ .

ಹಾಗೆಯೇ ಹೈದರಾಬಾದಿನ 6 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ – ಕೊಲೆ ಮತ್ತು ಮುಂಬೈಯ 34 ರ ಮಹಿಳೆಯ ಮೇಲಿನ ಅತ್ಯಾಚಾರ ಹಾಗೂ ಬರ್ಬರ ಕೊಲೆ . ಹೀಗೆ ಯಾವುದೇ ವಯೋಮಾನದ ಮಿತಿಯಿಲ್ಲದೆ ಘಟನೆ ನಡೆದು ಸಾವಿಗೀಡಾಗುತ್ತಿದ್ದಾರೆ . ಆದ್ದರಿಂದ ಇದಕ್ಕೆಲ್ಲ ಮೂಲ ಕಾರಣವಾಗಿರುವ ಅಶ್ಲೀಲ ಸಿನಿಮಾ – ಸಾಹಿತ್ಯಗಳನ್ನು ಈ ಕೂಡಲೇ ನಿಷೇಧಿಸಬೇಕೆಂದು ಹಾಗೂ ಜಸ್ಟೀಸ್ ವರ್ಮ ಆಯೋಗದ ಶಿಫಾರಸ್ಸುಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದರು.ಎಐಡಿವೈಓನ ಜಿಲ್ಲಾ ಸಂಘಟನಾಕಾರರು ಮಾತಾನಾಡುತ್ತಾ ,
ಇಂದಿನ ಯುವಕರಲ್ಲಿ ಸೂಕ್ತ ಆದರ್ಶದ ಕೊರತೆ ಹಾಗೂ ಎಲ್ಲೆಲ್ಲೂ ಅಶ್ಲೀಲತೆಯ ವ್ಯಾಪಕ ಪ್ರಚಾರದಿಂದಾಗಿ ಇಂಥಹ ಘಟನೆಗಳು ದಿನೇದಿನೇ ಸಂಭವಿಸುತ್ತಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಜ್ಯೋತಿ ಕುಕ್ಕುವಾಡ,ಜಿಲ್ಲಾ ಕಾರ್ಯದರ್ಶಿ ಭಾರತಿ, ಉಪಾಧ್ಯಕ್ಷರಾದ ಬನಶ್ರೀ, ಸರಸ್ವತಿ,ಪೂಜಾ, ಪುಷ್ಪ, ಕಾವ್ಯ ತಿಪ್ಪೇಸ್ವಾಮಿ,ಪರಶುರಾಮ್ ಇನ್ನಿತರರಿದ್ದರು

Leave a Reply

Your email address will not be published. Required fields are marked *

error: Content is protected !!