ಲೋಕಲ್ ಸುದ್ದಿ

ಎಲ್ಲ ಪಕ್ಷ ಕೈ ಬಿಟ್ರು, ಆದರೆ ಸೆರೆಗೊಡ್ಡಿ ಕೇಳುವೆ ನೀವು ನನ್ನ ಕೈ ಬಿಡಬೇಡಿ

ಎಲ್ಲ ಪಕ್ಷ ಕೈ ಬಿಟ್ರು, ಆದರೆ ಸೆರೆಗೊಡ್ಡಿ ಕೇಳುವೆ ನೀವು ನನ್ನ ಕೈ ಬಿಡಬೇಡಿ

ಮಾಯಕೊಂಡ : ಪ್ರತಿಯೊಬ್ಬ ಗೆಲುವಿನ ಪುರುಷನ ಹಿಂದೆ ಹೆಣ್ಣು ಇರುತ್ತಾಳೆ ಎಂದು ಹಲವರು ಹೇಳುತ್ತಾರೆ. ಆದರೆ ನನ್ನ ವಿಷಯದಲ್ಲಿ ಹಾಗಿಲ್ಲ…ನನ್ನ ಹಿಂದೆ ಮಾಯಕೊಂಡದ ಜನ ಇದ್ದಾರೆ..ಅವರ ಅಭಿವೃದ್ಧಿಯೇ ನನ್ನ ಗುರಿ ಎಂದು ಸವಿತಾಬಾಯಿ ಹೇಳಿದರು.

ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಕಾರಿಗನೂರಿನಲ್ಲಿ ಮತ ಪ್ರಚಾರ ಮಾಡಿ, ನನಗೆ ಕಾಂಗ್ರೆಸ್ ಕೈ ಕೊಟ್ಟಿತು, ಜೆಡಿಎಸ್ ನಂಬಿಕೆ ಇಟ್ಟು ಮೋಸ ಮಾಡಿತು…ಕೆಲವರು ನನ್ನ ಚಾರಿತ್ರ್ಯವಧೆ ಮಾಡಿದ್ರು…ಕೆಟ್ಟ ಕೆಲಸ ಮಾಡದೇ ಹೋದರೂ, ನನ್ನ ಮೇಲೆ ಅಪವಾಧ ಮಾಡಿದ್ರು…ಆದರೂ ನಾನು ಎದೆಗುಂದಲಿಲ್ಲ…ಅದಕ್ಕೆ ಕಾರಣ ಮಾಯಕೊಂಡದ ಜನ ನನ್ನ ಹಿಂದೆ ಇದ್ದಾರೆಯೆಂದು..ನನಗೆ ಎಲ್ಲರೂ ಮೋಸ ಮಾಡಿದ್ರು, ನಂಬಿಕೆ ದ್ರೋಹವಾಯಿತು. ಆದ್ದರಿಂದ ನಾನು ಸೆರೆಗೊಡ್ಡಿ ಕೇಳುವೆ ನನಗೆ ಮತ ನೀಡಿ, ಕೈ ಬಿಡಬೇಡಿ…ನಿಮ್ಮ ನಂಬಿ ಬಂದಿದ್ದೇನೆ‌‌‌‌…ಮಗಳು ತವರಿಗೆ ಬಂದಿದ್ದಾಳೆ…ನಿಮ್ಮ ಆಶೀರ್ವಾದದೊಂದಿಗೆ ಅವಳನ್ನು ಗೆಲ್ಲಿಸಿ ನಿಮ್ಮನ್ನು ಎಂದಿಗೂ ಕೈ ಬಿಡೋದಿಲ್ಲ ಎಂದು ಸವಿತಾಬಾಯಿ ಹೇಳಿದರು.

ಎಲ್ಲ ಪಕ್ಷ ಕೈ ಬಿಟ್ರು, ಆದರೆ ಸೆರೆಗೊಡ್ಡಿ ಕೇಳುವೆ ನೀವು ನನ್ನ ಕೈ ಬಿಡಬೇಡಿ

ಈಗಾಗಲೇ ಹೋದ ಕಡೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ…ಜನ ಅಪ್ಪಿಕೊಳ್ಳುತ್ತಿದ್ದಾರೆ…ಅತಿಹೆಚ್ಚು ಮತಗಳಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ ಎಂದರು.

ನನ್ನ ಗುರುತು ಬೀಸೋ ಕಲ್ಲು…ಈ ಗುರುತಿಗೆ ತಪ್ಪದೇ ಮತ ಹಾಕಿ, ಬಿಜೆಪಿಗೆ ಮಾಜಿ ಸಿಎಂ ಯಡಿಯೂರಪ್ಪ ಶ್ರೀ ರಕ್ಷೆ ಇದೆ, ಕಾಂಗ್ರೆಸ್ ಗೆ ಮಾಜಿ ಸಚಿವ ಆಂಜನೇಯ, ಮಲ್ಲಿಕಾರ್ಜುನ ಶ್ರೀ ರಕ್ಷೇ…ನನಗೆ ಯಾರು ಇಲ್ಲ…ಜನರೇ ನನ್ನ ಬೆನ್ನಲುಬು ಎಂದರು. ಇದೇ ಸಂದರ್ಭದಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಿರ್ಮಾಣವೇ ನನ್ನ ಗುರಿ, ಮಹಿಳೆಗೆ ಅಧಿಕಾರ ನೀಡಿ, ಅಭಿವೃದ್ದೀಗೆ ಕೈ ಜೋಡಿಸಿ ಎಂದು ಜನರಲ್ಲಿ ಮನವಿ ಮಾಡಿದರು.

 

 

Click to comment

Leave a Reply

Your email address will not be published. Required fields are marked *

Most Popular

To Top