ಅಲ್ಪಸಂಖ್ಯಾತ ಇಲಾಖೆಯಡಿಯಲ್ಲಿ ಬರುವ ಜೈನ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿಗೆ ಮನವಿ

ದಾವಣಗೆರೆ :ರಾಜ್ಯಸರ್ಕಾರಕ್ಕೆ ಪ್ರತ್ಯೇಕ ಜೈನ ವಿದ್ಯಾರ್ಥಿಗಳಿಗಾಗಿ ವಸತಿ ಶಾಲೆ ಹಾಗೂ ವಸತಿಗೃಹಗಳನ್ನು ನಿರ್ಮಿಸಬೇಕೆಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಗೌತಮ್ ಜೈನ್ ರವರು ಕರ್ನಾಟಕ ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪಜೀ ಹಾಗೂ ನಿಕಟಪೂರ್ವ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಶ್ರೀಮಂತ್ ಪಾಟೀಲ್ ರವರಿಗೆ ಪ್ರಸ್ತಾಪ ಮಾಡಿದ್ದರು, ಇದರ ಹಿನ್ನೆಲೆ ರಾಜ್ಯ ಸರ್ಕಾರವು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಜೈನ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ವಸತಿ ಶಾಲೆ ಹಾಗೂ ವಸತಿ ಗೃಹಗಳ ನಿರ್ಮಾಣ ಮಾಡಬೇಕೆಂದು ಆದೇಶವನ್ನು ಹೊರಡಿಸಿತು.
ಹೀಗಾಗಿ ಇಂದು ದಾವಣಗೆರೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಶ್ರೀ ಅಮಿತ್ ಬಿದರಿಯವರಿಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ನಿಗಮದ ನಿರ್ದೇಶಕರಾದ ಶ್ರೀ ಗೌತಮ ಜೈನ್, ಪ್ರಧಾನಮಂತ್ರಿ 15 ಪಾಯಿಂಟ್ ಪ್ರೋಗ್ರಾಮ್ ನ ನಿರ್ದೇಶಕರಾದ ಶ್ರೀ ಅಶೋಕ್ ಜೈನ್, ಭಾರತೀಯ ಜೈನ ಸಂಘಟನೆಯ ಸುನಿಲ್ ಜೈನ್, ಭಾವನಾ ಜೈನ್ ಹಾಗೂ ಮಮತಾ ಜೈನ್ ಉಪಸ್ಥಿತರಿದ್ದರು.