ದಾವಣಗೆರೆ ಗಲಭೆಗೆ ಕಾರಣವಾದ ಸ್ಥಳದಲ್ಲಿ ಎರಡು ಕೋಮಿನ ಮುಖಂಡರಿಂದ ಸೌಹಾರ್ದ ಸಭೆ
ದಾವಣಗೆರೆ: ದಾವಣಗೆರೆಯಲ್ಲಿ ನಡೆದ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ಪ್ರಕರಣ ಹಿನ್ನೆಲೆ ಘಟನೆ ನಡೆದ ಸ್ಥಳದಲ್ಲಿ ಇಂದು ದಿನಾಂಕ ಸೆಪ್ಟೆಂಬರ್ 22 ರಂದು ಎರಡು ಕೋಮಿನ ಮುಖಂಡರಿಂದ ಸೌಹಾರ್ದ ಸಭೆ ಏರ್ಪಟ್ಟಿತು.
ಬೇತೂರು ರಸ್ತೆಯ ವೆಂಕಟೇಶ್ವರ ದೇವಸ್ಥಾನದ ಮುಂಭಾಗ ಸೌಹಾರ್ದ ಸಭೆ ನಡೆದಿದ್ದು, ನೂರಾನಿ ಮಸೀದಿ ಕಮಿಟಿ ಹಾಗೂ ವೆಂಕಟೇಶ್ವರ ದೇವಸ್ಥಾನ ಕಮಿಟಿಯಿಂದ ಸೌಹಾರ್ದ ಸಭೆ ಆಯೋಜಿಸುವ ಮೂಲಕ ಎರಡೂ ಕೋಮಿನ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸೌಹಾರ್ದ ಸಭೆಯಲ್ಲಿ ದಾವಣಗೆರೆ ಎಸ್ ಪಿ ಉಮಾ ಪ್ರಶಾಂತ್ ಭಾಗಿಯಾಗಿದ್ದರು, ಗಲಭೆ ನಡೆಯಬಾರದಿತ್ತು ನಡೆದು ಹೋಗಿದೆ. ಎರಡು ಕೋಮಿನ ಜನರು ಸಹೋದರರ ರೀತಿ ಬಾಳೋಣಾ. ಕೆಲ ಕಿಡಿಗೇಡಿಗಳಿಂದ ಆಗಬಾರದ್ದು ಆಗಿ ಹೋಗಿದೆ ಇನ್ನು ಮುಂದೆ ಸೌಹಾರ್ದ ವಾಗಿ ಜೀವನ ಮಾಡಿಕೊಂಡು ಹೋಗೋಣಾ ಎರಡು ಕೋಮಿನ ಮುಖಂಡರು ಪರಸ್ಪರ ಸೌಹಾರ್ದತೆಯಿಂದ ಒಪ್ಪಿಕೊಂಡರು.