ಮಂಡ್ಯದ ಗೆಜ್ಜಲಗೆರೆಯಲ್ಲಿ ಅಮಿತ್ ಶಾ
ಮಂಡ್ಯ: ಹುಲಿಗೆರೆಪುರ ಹೆಲಿಪ್ಯಾಡ್ ಗೆ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸಿದರು. ಇನ್ನು ಶಾ ಅವರ ಜೊತೆ ಸಿಎಂ ಬಸವರಾಜ್ ಬೊಮ್ಮಾಯಿ, ಪ್ರಹ್ಲಾದ ಜೋಶಿ ಹುಲಿಗೆರೆಪುರದಿಂದ ಗೆಜ್ಜೆಲೆರೆಗೆ ತೆರಳುತ್ತಿದ್ದಾರೆ. ಗೆಜ್ಜೆಲೆರೆಯಲ್ಲಿ ಮೆಗಾ ಹಾಲಿನ ಡೈರಿ ಉದ್ಘಾಟಿಸಲಿದ್ದಾರೆ. 47 ಎಕರೆ ವಿಸ್ತೀರ್ಣದಲ್ಲಿ ಹಾಲು ಉತ್ಪಾದಕ ಘಟಕ ನಿರ್ಮಾಣವಾಗಿದ್ದು, 260.9 ಕೋಟಿ ರೂಪಾಯಿ ವೆಚ್ಚದಲ್ಲಿ ಡೈರಿಯನ್ನು ನಿರ್ಮಾಣ ಮಾಡಲಾಗಿದೆ. ಇನ್ನು ಡೈರಿಯಲ್ಲಿ ಒಂದು ದಿನಕ್ಕೆ 30 ಮೆಟ್ರಿಕ್ ಟನ್ ಹಾಲಿನ ಪೌಡರ್ ಉತ್ಪಾದನೆ ಮಾಡಲಾಗುತ್ತದೆ.
ಡೈರಿ ಉದ್ಘಾಟನೆ ನಂತರ ಇಂದು ನಡೆಯುವ ಜನಸಮಾವೇಶದಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ. ಮಂಡ್ಯದ ವಿವಿ ಮೈದಾನದಲ್ಲಿ ಬಿಜೆಪಿ ಸಮಾವೇಶ ಆಯೋಜನೆ ಮಾಡಲಾಗಿದ್ದು, ಅಮಿತ್ ಶಾ ಅವರು ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಹಾಗೂ ಅವರಿಗೆ ಜಡ್‍ಪ್ಲಸ್ ಭದ್ರತೆ ಇರುವ ಕಾರಣ ವಿಶ್ವವಿದ್ಯಾನಿಲಯಕ್ಕೆ ರಜೆ ಘೋಷಣೆ ಮಾಡಲಾಗಿದೆ.